ಮುಂಬೈ, ಡಿ 19 (MSP): ಪ್ರಧಾನಿಗೆ ನೀಡುವ ಭದ್ರತೆ ನೆಪವೊಡ್ದಿದ ಮಹಾರಾಷ್ಟ್ರ ಸರ್ಕಾರದ ಮತ್ತು ಪೊಲೀಸರ ವರ್ತನೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು ಈ ನಡೆಯ ವಿರುದ್ದ ವ್ಯಾಪಕ ಟೀಕೆ ಕೇಳಿ ಬಂದಿದೆ. ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ಭದ್ರತೆಗೆ ತೊಂದರೆ ಆಗುತ್ತೆ ಎಂದು ಮುಂಬೈನಲ್ಲಿ ಸ್ಮಶಾನಕ್ಕೆ ಬಾಗಿಲು ಹಾಕಿದ ಮತ್ತು ಮೂರು ಮದುವೆಗಳನ್ನು ರದ್ದು ಮಾಡಿದ ಘಟನೆ ನಡೆದಿದೆ.
ಮದುವೆ ಮಾಡೋದು ಅಂದ್ರೆ ಸುಲಭದ ಮಾತೇ? ಆದರೆ ಆಮಂತ್ರಣ ಹಂಚಿ, ಹಣ ಹೊಂದಿಸಿ ಕಲ್ಯಾಣ ಮಂಟಪ ಬುಕ್ ಮಾಡಿದ್ರೆ, ನಿಮ್ಮ ಮದುವೆಯಿಂದ ಪ್ರಧಾನಿ ಭದ್ರತೆಗೆ ತೊಂದರೆ ಎಂದು ನಡೆಯಬೇಕಾಗಿದ್ದ ಮೂರು ಮದುವೆಗಳನ್ನು ಮಹಾರಾಷ್ಟ್ರ ಸರ್ಕಾರದ ಮತ್ತು ಪೊಲೀಸರು ರದ್ದು ಮಾಡಿದ್ದಾರೆ.
ಅಲ್ಲದೆ ಮೋದಿ ಕಾರ್ಯಕ್ರಮ ನಡೆಯುವ ಸ್ಥಳದಿಂದ 200 ಮೀಟರ್ ದೂರದಲ್ಲಿದ್ದ ಸ್ಮಶಾನಕ್ಕೆ ಸೋಮವಾರ ರಾತ್ರಿಯಿಂದಲೇ ಯಾವುದೇ ಮೃತದೇಹ ತರದಂತೆ ಹಾಗೂ ಶವಸಂಸ್ಕಾರ ನಡೆಸದಂತೆ ನಿಷೇಧಿಸಲಾಗಿತ್ತು. ಮೋದಿ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದ ಸನಿಹವೇ 3 ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿದ್ದ 3 ವಿವಾಹ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.