Karavali
ಮಂಗಳೂರು: ’ಸೌಹಾರ್ದತೆ, ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಿ" - ನೂತನ ಬಿಷಪ್ ರಿಂದ ಪ್ರಥಮ ಕ್ರಿಸ್ಮಸ್ ಸಂದೇಶ
- Wed, Dec 19 2018 03:07:50 PM
-
ಮಂಗಳೂರು, ಡಿ 19 (MSP): ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಡಿ .19ರ ಮಂಗಳವಾರ ನಗರದ ಬಿಷಪ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ತಮ್ಮ ಸಂದೇಶದಲ್ಲಿ ಅಂತರ್ ಧರ್ಮೀಯ ಸೌಹಾರ್ದತೆ, ಮಾನವೀಯತೆ ಹಾಗೂ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುವಂತೆ ಮನವಿ ಮಾಡಿದರು.
ಬಿಷಪ್ ಅವರು ನೀಡಿದ ಸಂದೇಶದ ಪೂರ್ಣ ರೂಪ ಇಲ್ಲಿದೆ
ಕ್ರಿಸ್ಮಸ್ ಹಬ್ಬವು ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮವಾಗಿದೆ. ಪ್ರತೀ ವರ್ಷ ಡಿಸೆಂಬರ್ ತಿಂಗಳು ಬಂದಾಗ ಯೇಸುವಿನ ಜನನದ ಹಬ್ಬವನ್ನು ಆಚರಿಸಲು ನಾವೆಲ್ಲಾ ತಯಾರಿ ಮಾಡುತ್ತೇವೆ. ಯಾಕಾಗಿ ದೇವರು ಈ ಧರೆಗೆ ಬಂದರು ಎಂಬ ಪ್ರಶ್ನೆಗೆ ನಾವೆಲ್ಲರೂ ಉತ್ತರ ಹುಡುಕುತ್ತೇವೆ. ದೇವರು ಸೃಷ್ಟಿಸಿದ ಪ್ರತಿಯೊಬ್ಬ ಮನುಷ್ಯನು ದೇವರನ್ನುಅರಸುತ್ತಾನೆ. ಇದು ಒಂದು ನಿರಂತರ ಹುಡುಕಾಟ. ಮನುಷ್ಯನ ಈ ದೈವಿ ಹುಡುಕಾಟಕ್ಕೆ ತೃಪ್ತಿ ಸಿಗಲೆಂದು ದೇವರೇ ನಮ್ಮೆಡೆಗೆ ಬಂದಿದ್ದಾರೆ.ಎರಡನೆಯದಾಗಿ, ನಮ್ಮ ಹೃದಯ ಪ್ರೀತಿಗಾಗಿ ನಿರಂತರ ಹಾತೊರೆಯುವಾಗ, ಮನಸ್ಸು ಸತ್ಯವನ್ನು ತಿಳಿಯಲು ತವಕ ಪಡುತ್ತದೆ. ನಾವು ಪ್ರೀತಿಯಲ್ಲಿ ಸಂಪೂರ್ಣತೆಯನ್ನು ಹುಡುಕುತ್ತೇವೆ. ಈ ಸಂಪೂರ್ಣ ಪ್ರೀತಿಯ ಹುಡುಕಾಟಕ್ಕೆ ಕೊನೆ ಎಲ್ಲಿ? ನಿರಂತರ ಸತ್ಯವನ್ನು ಅನ್ವೇಷಿಸುವ ನಮ್ಮ ಮನಸ್ಸು ಅದೆಲ್ಲಿ ಸಂತೃಪ್ತಿ ಪಡೆಯುತ್ತಿದೆ?.ಹೀಗೆ ನಮ್ಮೊಳಗಿನ ಮನಸ್ಸು, ಹೃದಯಗಳ ನಿರಂತರ ಹುಡುಕಾಟಕ್ಕೆ ಸ್ಪಂದಿಸಿ, ಸತ್ಯ - ಪ್ರೀತಿಯೇಆಗಿರುವದೇವರುತಮ್ಮನ್ನೆ ಈ ಭೂಲೋಕಕ್ಕೆ ಪ್ರಚುರಪಡಿಸುತ್ತಾರೆ. ದೇವರು ಹಾಗೂ ಮನುಷ್ಯನ ಸಮಾಗಮವೇಕ್ರಿಸ್ಮಸ್ ಹಬ್ಬದ ಸಾರ.
ಸಮಸ್ತ ಕ್ರೈಸ್ತ ಭಾಂದವರು ಯೇಸು ಸ್ವಾಮಿಯನ್ನು ನಿಜ ದೇವರು, ನಿಜ ಮನುಷ್ಯರೆಂದು ಆರಾಧಿಸುತ್ತಾರೆ. ಸಂತ ಪಾವ್ಲಾರು, ಫಿಲಿಪ್ಪಿಯರಿಗೆ ಬರೆದ ಪತ್ರದಲ್ಲಿ ಹೇಳುವಂತೆ, "ದೇವ ಸ್ವರೂಪಿ ತಾನಾಗಿದ್ದರೂ ನಿರುತದೇವರಿಗೆ ಸಮನಾದ ಆ ಸಿರಿ ಪದವಿನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ ತನ್ನನ್ನು ಬರಿದು ಮಾಡಿಕೊಂಡು ಮನುಜನಾಕಾರದಲ್ಲಿ ಕಾಣಿಸಿಕೊಂಡು ನರಮಾನವರಿಗೆ ಸಮಾನಾದ". (ಫಿಲಿಪ್ಪಿ ೨: ೬ ,೭)
ಮನುಷ್ಯರನ್ನು ತನ್ನ ದೈವತ್ವದಲ್ಲಿ ಸೇರಿಸಿಕೊಳ್ಳಲು, ದೇವರು ಮಾನವರಾದರು ಮತ್ತು ನಮ್ಮೊಡನೆ ಜೀವಿಸಿದರು-ಅವರೇ ’ಇಮ್ಮಾನ್ವುಯೆಲ್’, ಅಂದರೆ, "ದೇವರು ನಮ್ಮ ಸಂಗಡಇದ್ದಾರೆ" ಎಂದು ಅರ್ಥ. ಈ ದೇವರಲ್ಲಿ ವಿಶ್ವಾಸವಿಟ್ಟು ಅವರ ದೈವತ್ವದಲ್ಲಿ ಒಂದಾಗುವುದೇ ನಮ್ಮ ಸೌಭಾಗ್ಯ.ಆದರೆ, ಮಾನವ ತನ್ನೊಳಗಿನ ಸೆಳೆತಗಳಿಗೆ ಒಳಗಾಗಿ, ಶಾಶ್ವತ ಸುಖ - ಶಾಂತಿ ನೀಡುವದೇವರನ್ನುತೊರೆದು, ಕ್ಷಣಿಕ ಸುಖದೆಡೆಗೆ ಮರಳುಗಾಡಿನಲ್ಲಿ ಮರಿಚ್ಚೀಕೆ ಬೆನ್ನಟ್ಟಿದಂತೆ ಹೋಗುತ್ತಿದ್ದಾನೆ. ದಾರಿತಪ್ಪಿದ ಮನುಜನನ್ನುದೇವರೆಡೆಗೆ ಸೆಳೆಯಲು, ದೇವರೇ ಮನುಜನಾಗಿ ಬೆತ್ಲೆಹೆಮಿನಗೊದಲಿಯ ಮೇಲೆ, ಮಾತೆ ಮರಿಯಳ ಉದರದಲ್ಲಿ, ಪವಿತ್ರಾತ್ಮರ ಶಕ್ತಿಯಿಂದ ಹುಟ್ಟಿ ಬಂದರು. ಇವರೇ ಆ ಯೇಸುಸ್ವಾಮಿ. ದೇವಕುಮಾರನಜನನದಿಂದ ಸ್ವರ್ಗ - ಭೂಲೋಕಗಳು ಹರ್ಷಗೊಂಡಿವೆ. ಅವರ ಜನನದ ವಾರ್ತೆ ಸಮಾಜದಲ್ಲಿ ಅಲ್ಪವಾಗಿ ಕಾಣಲ್ಪಡುವ ಕುರುಬರಿಗೆ ದೂತರಿಂದ ಲಭಿಸಿತು. "ಮಹೋನ್ನತದಲ್ಲಿದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ" ಎಂದು ದೂತ ವೃಂದವು ಕ್ರಿಸ್ತನಜನನದ ಸಮಯದಲ್ಲಿ ಹಾಡಿತು. ಈ ಭೂಲೋಕದಲ್ಲಿ ನಾವೆಲ್ಲರು ಸುಮನಸ್ಕರಾಗಿ ಜೀವಿಸಿದಾಗ ಸಿಗುವ ಫಲವೇ "ಶಾಂತಿ". ದೇವರ ಶಾಂತಿಯಲ್ಲಿ ಜೀವಿಸಿ, ಪರರನ್ನು ಆ ಶಾಂತಿಯಲ್ಲಿ ಜೀವಿಸಲು ಪ್ರೇರೇಪಿಸುವವರೇ ಒಬ್ಬರಿಗೊಬ್ಬರು ಬಂಧುಗಳು. ಯಾಕೆಂದರೆಯೇ ಸುಸ್ವಾಮಿ ಹೇಳುತ್ತಾರೆ "ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು ಅವರು ದೇವರ ಮಕ್ಕಳು ಎನಿಸಿಕೊಳ್ಳುವರು" (ಮತ್ತಾಯ೫ : ೯)
ಕ್ರೈಸ್ತ ವಿಶ್ವಾಸದ ಪ್ರಕಾರ, ದೇವರೆ ನಮ್ಮ ಆದಿ ಮತ್ತುಅಂತ್ಯ (ಆಲ್ಫಾ ಮತ್ತು ಓಮೆಗಾ), ದೇವರಿಂದಲೇನಮ್ಮೆಲ್ಲರಉಗಮ,ದೇವರಲ್ಲಿಯೇನಮ್ಮೆಲ್ಲರಸಮಾಗಮ, ಈ ನಡುವಿನ ನಮ್ಮಜೀವನವೇ ಬಂಧತ್ವದ ಸಂಗಮ. ಪ್ರತಿಯೊಬ್ಬರು ಸಹೋದರ - ಸಹೋದರಿಯಂತೆ (ಭ್ರಾತೃತ್ವ) ಈ ಸೃಷ್ಟಿಯಲ್ಲಿ, ಪರರನ್ನು ಪರಿಗಣಿಸಿ, ಗೌರವಿಸಿ ಜೀವಿಸಿದಾಗಲೇ ನಿಜವಾದಆತ್ಮಶಾಂತಿ ಪಡೆಯಲು ಸಾಧ್ಯ. ಇದೇ ನಿಜವಾದ ಬಂಧುತ್ವದಅನುಭವ.ಅಂತಹ ಮಾನವೀಯತೆಗೆ ಧರ್ಮಗಳ ಗೋಡೆಗಳಿಲ್ಲ.ನಿಜವಾದಆಧ್ಯಾತ್ಮಿಕತೆ, ಮಾನವೀಯತೆಯನೆಲೆ ಹಾಗೂ ಭದ್ರ ತಳಹದಿಯಾಗಿದೆ.
ದೇವಪುತ್ರಯೇಸುವಿನ ಜನನದಿಂದ ಸಮಸ್ತ ಸೃಷ್ಟಿಯೇ ಪುಳಕಗೊಂಡಿತು. ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ತನ್ನ ಹೃದಯಾಂತರಾಳದ ನಿರೀಕ್ಷೆಗಳಿಗೆ ಯೇಸುವಿನಲ್ಲಿ ಫಲಕಂಡಿತು.ಸೃಷ್ಟಿಯ ಮುಕುಟವೇ ಮಾನವ; ಅದರಲ್ಲೂ ಪಾಪರಹಿತಕ್ರಿಸ್ತನು ಆ ಮುಕುಟದ ವಜ್ರವಿದ್ದಂತೆ. ದುರಾದೃಷ್ಡವೆಂದರೆ ಮನುಷ್ಯ ತನ್ನ ಸ್ವಾರ್ಥದಿಂದ ಸೃಷ್ಠಿಯನ್ನು ವಿಕಾರಗೊಳಿಸುತ್ತಿದ್ದಾನೆ. ಇತರ ಮನುಷ್ಯರ ವಿರುದ್ದ ಹಿಂಸೆಯ ದಾರಿಯನ್ನು ಹಿಡಿಯುತ್ತಾನೆ.ಪಾಪದ ಕೂಪಕ್ಕೆ ಬಿದ್ದಿರುವ ಮನುಕುಲವನ್ನು ರಕ್ಷಿಸಲು, ಈ ಪ್ರಕೃತಿಯನ್ನು ಪುನರಶ್ಚೇತನಗೊಳಿಸಲು, ಧರೆಗೆ ಬಂದ ಯೇಸು ಕಂದನಿಗೆ ನಮ್ಮ ಹೃನ್ಮನಗಳಲ್ಲಿ ನೆಲೆಸಲು ಅವಕಾಶ ಕೊಡೊಣ. ಈ ಪ್ರಕೃತಿ ನಮ್ಮೆಲ್ಲರ ಸಾಮಾನ್ಯ ವಾಸ್ತವ್ಯದ ಮನೆ, ಇದರ ರಕ್ಷಣೆ ಮಾಡುವುದು ನಮ್ಮಕರ್ತವ್ಯ ಎಂದು ಪೋಪ್ ಫ್ರಾನ್ಸಿಸ್ರವರು ತಮ್ಮ ವಿಶ್ವ-ಪತ್ರ ’ಲಾವ್ದಾತೊಸಿ"ಯಲ್ಲಿ ಕರೆಕೊಟ್ಟಿದ್ದಾರೆ. ಆದುದರಿಂದ ಈ ಸುಂದರ ಸೃಷ್ಟಿಯ ವಿನಾಶಕ್ಕೆ ಕಾರಣಾವಾಗದೇ ಪ್ರಕೃತಿಯನ್ನು ಸಂರಕ್ಷಿಸುವ ದೂತರಾಗೋಣ. ಇಡೀ ಸೃಷ್ಟಿಯನ್ನೇ ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ಸಹಕರಿಸೋಣ, ಮನುಕುಲವನ್ನೂ ಸಂರಕ್ಷಿಸೊಣ.
ಈ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ, ಗೋದಲಿಯ ಮೇಲೆ ಕಡುಬಡತನದಲ್ಲಿ ಜನಿಸಿದ ಯೇಸುಸ್ವಾಮಿ ತಮ್ಮನ್ನೇನಮಗೆ ಶ್ರೇಷ್ಟ ಉಡುಗೊರೆಯಾಗಿ ನೀಡುತ್ತಾರೆ. ಈ ಬಾಲ ಯೇಸುವನ್ನು ಮುದ್ದಿಸಿ, ಆರಾಧಿಸಿ, ಸಂತೋಷಿಸುವಾಗ, ನಾವು ಕೂಡ ಪರರಿಗೆ ಒಂದು ಉಡುಗೊರೆಯಾಗೋಣ. ಇದೇ ನಮ್ಮ ಆಸ್ಥಿತ್ವ, ಇದೇ ನಮ್ಮ ಬಂಧುತ್ವ. ಸಮಸ್ತ ಜನರಿಗೆ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಗುರು ಮ್ಯಾಕ್ಸಿಂ ನೊರೊನ್ಹಾ , ಚಾನ್ಸಲರ್ ವಿಕ್ಟರ್ ಜೋರ್ಜ್ ಡಿಸೋಜಾ, ವಿಕ್ಟರ್ ವಿಜೆಯ್ ಲೋಬೊ,ಮಾರ್ಸೆಲ್ ಮೊಂತೇರೊ,ಮೆಲ್ವಿನ್ ನೊರೊನ್ಹಾ, ರಿಚಾರ್ಡ್ಡಿಸೋಜಾ, ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.