ಮಂಗಳೂರು, ಡಿ21(SS): ಭಂಡಾರಿ ಬಿಲ್ಡರ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಹೊಸ ವರುಷದ ಸಂಭ್ರಮಾಚರಣೆ “ಫ್ಯೂನಿಕ್ಸ್ – 2019” ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ.31ರಂದು ರಾತ್ರಿ ನಡೆಯಲಿದೆ.
ಖ್ಯಾತ ಡಿಜೆ ಸಂಗೀತಗಾರರಾದ ನಿಖಿಲ್ ಚಿನ್ನಪ್ಪ ಈ “ಫ್ಯೂನಿಕ್ಸ್ – 2019” ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಜನರ ಮನಸೂರೆಗೊಳಿಸಲಿದ್ದಾರೆ. ಜೊತೆಗೆ ಖ್ಯಾತ ನೃತ್ಯ ತಂಡಗಳು, ಪ್ರಸಿದ್ಧ ಕಲಾವಿದರು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ. ಮಕ್ಕಳಿಗೂ ವಿಶೇಷ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
“ಫ್ಯೂನಿಕ್ಸ್ – 2019” ಸಂಜೆ 7 ಗಂಟೆಗೆ ಆರಂಭವಾಗಲಿದ್ದು ತಡರಾತ್ರಿಯವರೆಗೂ ರಸದೌತಣ ಉಣಬಡಿಸಲಿದೆ. ವಿಶೇಷ ಮನೋರಂಜನೆಯೊಂದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಈ ಕಾರ್ಯಕ್ರಮದಲ್ಲಿದೆ.
ಈ ಕಾರ್ಯಕ್ರಮವನ್ನು ಕರಾವಳಿಯ ಇತಿಹಾಸದಲ್ಲಿಯೇ ಅತ್ಯಂತ ಸ್ಮರಣೀಯವನ್ನಾಗಿಸಲು ಸಂಘಟಕರು ನಿರ್ಧರಿಸಿದ್ದು, ಈಗಾಗಲೇ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ. ದಾಯ್ಜಿವರ್ಲ್ಡ್ ವಾಹಿನಿ ಮತ್ತು ರೆಡ್ ಎಫ್.ಎಂ 93.5 ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ.
ಪ್ರವೇಶಕ್ಕಾಗಿ ಸಂಪರ್ಕಿಸಿ – 8904817900 / 9900665101 / 7676767101 / 8880409101