ಮಂಗಳೂರು, ಡಿ22(SS): ವಿಭಿನ್ನ ಸಂಸ್ಕೃತಿ, ಪಾರಂಪರಿಕ ಹಿನ್ನೆಲೆಯಿಂದ ಇಂದು ಕರಾವಳಿ ಹೆಸರುಗಳಿಸುತ್ತಿರುವುದು ಮಾತ್ರವಲ್ಲದೆ, ವಿದೇಶಗಳಲ್ಲಿರುವವರಿಗೂ ಕರಾವಳಿಯ ಬಗ್ಗೆ ವಿಶೇಷ ಒಲವು ಇದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರಾವಳಿ ವಿಶ್ವಕ್ಕೇ ದಿಕ್ಸೂಚಿಯಾಗಿದೆ . ವಿಭಿನ್ನ ಸಂಸ್ಕೃತಿ, ಪಾರಂಪರಿಕ ಹಿನ್ನೆಲೆಯಿಂದ ಇಂದು ಕರಾವಳಿ ಹೆಸರುಗಳಿಸುತ್ತಿದೆ. ಇಷ್ಟೇ ಅಲ್ಲದೆ ವಿದೇಶಗಳಲ್ಲಿರುವವರಿಗೂ ಕರಾವಳಿಯ ಬಗ್ಗೆ ವಿಶೇಷ ಒಲವು ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರಾವಳಿ ಉತ್ಸವ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಡಾ. ಸೆಲ್ವಮಣಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮೇಯರ್ ಭಾಸ್ಕರ್ ಕೆ., ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮತ್ತಿತರರು ಉಪಸ್ಥಿತರಿದ್ದರು.