ಮಂಗಳೂರು,ಡಿ 22(MSP):ನಗರದ ಹೃದಯ ಭಾಗದಲ್ಲಿರುವ ನಂತೂರಿನ ಬಸ್ ನಿಲ್ದಾಣದ ಬಳಿ, ರಸ್ತೆ ಅಗಲೀಕರಣದ ನೆಪದಲ್ಲಿ ಮರವೊಂದನ್ನು ಕತ್ತರಿಸಿ ಅದರ ಬುಡದ ದಿಮ್ಮಿಯನ್ನು ತೆರವುಗೊಳಿಸದೇ ಅಧಿಕಾರಿಗಳು ಅಲ್ಲೇ ಬಿಟ್ಟಿದ್ದು ಇದರಿಂದ ಪಾದಾಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮರ ಬುಡಭಾಗ ಕಳೆದ ಕೆಲವು ವಾರಗಳಿಂದ ಅಲ್ಲಿದ್ದರೂ ಅವುಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ ! ಮರದ ತ್ಯಾಜ್ಯ ತೆಗೆಯದಿರುವುದರಿಂದ ಟ್ರಾಫಿಕ್ ಜಾಮ್, ಪಾದಚಾರಿಗಳಿಗೆ ಅಡ್ಡಿ ಮೊದಲಾದ ಸಮಸ್ಯೆಗಳು ಸೃಷ್ಟಿಯಾಗಿದೆ.
ಪಾದಚಾರಿ ಮಾರ್ಗಕ್ಕೆ ಅಡ್ಡವಾಗಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿರುವುದು ಮಾತ್ರವಲ್ಲದೇ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಅವಘಡಕ್ಕೀಡಾದ ಬಗ್ಗೆ ವರದಿಯಾಗಿದ್ದು ಜನರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೇ ನಂತೂರು ವೃತ್ತ ಅಪಘಾತ ವಲಯವಾಗಿ ಗುರುತಿಸಿಕೊಂಡಿದೆ. ಅದರೂ ಅಧಿಕಾರಿಗಳೂ ಕಡಿದು ಹಾಕಿದ ಮರದ ತ್ಯಾಜ್ಯವನ್ನು ತೆರವುಗೊಳಿಸುವ ಕಡೆ ಗಮನ ಹರಿಸಿದೆ ಗಾಢ ನಿದ್ರೆಯಲ್ಲಿದ್ದಾರೆ.