ಮಂಗಳೂರು, ಡಿ 23( (MSP): ಉಳ್ಳಾಲದ ಕೆ.ಸಿ ರೋಡ್ ನ ಕಿನ್ಯಾದ ಫಲಾಹ್ ಶಿಕ್ಷಣ ಸಂಸ್ಥೆಗೆ ನುಗ್ಗಿದ ಕಳ್ಳರು, ಪ್ರವಾಸಕ್ಕಾಗಿ ಮಕ್ಕಳಿಂದ ಸಂಗ್ರಹಿಸಿಟ್ಟಿದ್ದ 81 ಸಾವಿರ ರೂಪಾಯಿ ನಗದನ್ನು ಕಳ್ಳರು ದೋಚಿರುವ ಘಟನೆ ಡಿ.22 ರ ಶನಿವಾರ ರಾತ್ರಿ ನಡೆದಿದೆ.
ಕಾಲೇಜು ಪ್ರಾಂಶುಪಾಲರ ಕಚೇರಿ ಮತ್ತು ಹೈಸ್ಕೂಲ್ ಮುಖ್ಯೋಪಾಧ್ಯಾಯರ ಕಚೇರಿಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಮುಖ್ಯ ಶಿಕ್ಷಕಿ ಸಬೀನಾ ಕೈಸರ್ ಅವರ ವೈಯಕ್ತಿಕ 6,000 ನಗದು ಹಾಗೂ ಶಾಲಾ ಮಕ್ಕಳ ಪ್ರವಾಸಕ್ಕೆ ಕ್ರೋಡೀಕರಿಸಿದ 75,000 ನಗದನ್ನು ದೋಚಿದ್ದಾರೆ.
ವಿಪರ್ಯಾಸವೆಂದರೆ ಶನಿವಾರದಂದು ಸಂಸ್ಥೆಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಂಜಾ ಮಾಫಿಯಾದ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಧ್ವನಿಯೆತ್ತಿದ್ದರೆನ್ನಲಾಗಿದೆ.
ಈ ಹಿನ್ನಲೆಯಲ್ಲಿ ಶಾಲಾಡಳಿತದ ವಿರುದ್ಧ ಪ್ರತೀಕಾರಕ್ಕಾಗಿ ಕಳ್ಳತನ ನಡೆದಿರುವ ಬಗ್ಗೆ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ .ಉಳ್ಳಾಲ ಠಾಣಾ ಪೊಲೀಸರು ಕಳ್ಳತನ ನಡದಿರುವ ಶಾಲಾ ಸಂಸ್ಥೆಗೆ ಶ್ವಾನದಳದಿಂದ ಬೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿದ್ದಾರೆ.
ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆುತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆ ಎಂದು ಫಲಾಹ್ ಶಿಕ್ಷಣ ಹೆಸರುವಾಸಿಯಾಗಿತ್ತು.