ಮೂಡುಬಿದಿರೆ,ಡಿ 24 (MSP): ಮೂಡುಬಿದಿರೆ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಅವರ ತಾಯಿ ಹಾಗೂ ಅತ್ತೆ( ಪತ್ನಿಯ ತಾಯಿ) ಡಿ. 22 ರ ಶನಿವಾರ ಕೆಲವೇ ಗಂಟೆಗಳ ಅಂತರದಲ್ಲಿ ನಿಧನ ಹೊಂದಿದ್ದಾರೆ.
ತಾಯಿ ಬೇಬಿ ಶೆಟ್ಟಿ(66) ಅವರು ಶನಿವಾರ ಬೆಳಗ್ಗೆ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಂಜೆ 5 ಗಂಟೆ ಸುಮಾರಿಗೆ ಸುಕೇಶ್ ಶೆಟ್ಟಿಯ ಪತ್ನಿ ರೂಪಾ ಅವರ ತಾಯಿ ವಾರಿಜಾ ಶೆಟ್ಟಿ (60) ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ತಮ್ಮ ಮನೆಯಲ್ಲಿ ನಿಧನ ಹೊಂದಿದರು.