ಮಂಗಳೂರು, ಡಿ 24 (MSP): ಕರ್ನಾಟಕದ ಒತ್ತಡಕ್ಕೆ ಮಣಿದ ಗೋವಾ ಸರ್ಕಾರ ಕೇವಲ ಉತ್ತರ ಕನ್ನಡ ಜಿಲ್ಲೆಗಳ ಮೀನು ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಹಾಗೂ ಇತರ ಜಿಲ್ಲೆಗಳ ಮೀನು ಅಮದಿನ ಮೇಲಿನ ನಿಷೇಧವನ್ನು ಮುಂದುವರೆಸಿದೆ.
ಗೋವಾ ಸರ್ಕಾರ ಮೀನುಗಳಲ್ಲಿ ಕ್ಯಾನ್ಸರ್ ಗೆ ಕಾರಣ ಫಾರ್ಮಾಲಿನ್ ಅಂಶ ಇದೆ ಎನ್ನುವ ಕಾರಣ ನೀಡಿ ಹೊರ ರಾಜ್ಯಗಳ ಆಮದನ್ನು ನಿರ್ಬಂಧಿಸಿ ಗೋವಾ ಆರೋಗ್ಯ ಇಲಾಖೆ ಘೋಷಿಸಿತ್ತು. ಈ ಕಾರಣದಿಂದ ಕರ್ನಾಟಕ ಮೀನುಗಳಿಗೂ ನಿಷೇಧ ಹೇರಿತ್ತು.
ಕರಾವಳಿಯ ಮೀನುಗಾರರು ರಾಜಕೀಯ ನಾಯಕರ ಮೇಲೆ ಗೋವಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಿದ್ದರು . ಇದಲ್ಲದೆ ಕರ್ನಾಟಕದ ರಾಜಕೀಯ ನಾಯಕರ ತಂಡ ಗೋವಾ ಸಚಿವರನ್ನು ಬೇಟಿ ಮಾಡಿ ನಿಷೇಧ ತೆರವುಗೊಳಿಸುವಂತೆ ಒತ್ತಾಯಿಸಿದರು.
ಸದ್ಯ ಉತ್ತರ ಕನ್ನಡ ಜಿಲ್ಲೆಯಿಂದ ಲಘು ವಾಹನದಲ್ಲಿ ಮೀನು ಸಾಗಾಟಕ್ಕೆ ಮಾಡಲು ಗೋವಾ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಇಲ್ಲಿನ ಮೀನುಗಾರರು ಉತ್ತರ ಕನ್ನಡ ಜಿಲ್ಲಾ ಮೀನುಗಾರರು ಅಭಿವೃದ್ಧಿ ಸೂಸೈಟಿಯಿಂದ ನೀಡಿರುವ ಬಿಲ್ಲನ್ನು ತೋರಿಸಿ ಬಳಿಕ ಗೋವಾ ಪ್ರವೇಶಿಸಬೇಕಾಗುತ್ತದೆ.