ಉಪ್ಪಿನಂಗಡಿ, ಡಿ 25 (MSP): ಇಲ್ಲಿನ ಕುಮಾರಧಾರಾ ಸೇತುವೆಯಿಂದ ಡಿ.24 ರ ಸೋಮವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ಸ್ಥಳೀಯರು ಹಾಗೂ ಪೊಲೀಸರು ಸೇರಿ ರಕ್ಷಿಸಿದ್ದಾರೆ.
ಜನರು ನೋಡುನೋಡುತ್ತಿದ್ದಂತೆಯೇ ಉತ್ತರ ಪ್ರದೇಶದ ಮೂಲದ ಶುಭಂ ಕುಮಾರಧಾರಾ ಸೇತುವೆಯ ಮೇಲೆ ಏರಿ ಬಳಿಕ ನದಿಗೆ ಹಾರಿದ್ದಾನೆ. ನೀರಿನಲ್ಲಿ ಮುಳು
ಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಧಾವಿಸಿ ಬಂದ ಪೊಲೀಸರು ಸ್ಥಳೀಯರ ಸಹಕಾರದಿಂದ ವ್ಯಕ್ತಿ
ಯನ್ನು ನೀರಿನಿಂದ ಮೇಲಕ್ಕೆ ತೆಗೆದು ಪ್ರಥಮ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ರಕ್ಷಿಸಿದರು.
ಆತನನ್ನು ವಿಚಾರಿಸಿದಾಗ ತಾನೂ ಉತ್ತರ ಪ್ರದೇಶದ ಮೂಲದವನೆಂದೂ ಏಳೆಂದು ತಿಂಗಳ ಹಿಂದೆ ಲಾರಿ ಚಾಲಕರು ಇಲ್ಲಿಗೆ ತಂದು ಬಿಟ್ಟು ಹೋಗಿದ್ದಾರೆಂದು ತಿಳಿಸಿದ್ದಾನೆ. ಸ್ವಲ್ಪ ಮಾನಸಿಕ ಆಸ್ವಸ್ಥನೆಂದು ಕಾಣುವ ಈತ ಹಸಿವಿನಿಂದ ಬಳಲಿದ್ದ. ಬಳಿಕ ಈತನಿಗೆ ಪೊಲೀಸರು ಆಹಾರ ನೀಡಿ ಸಂತೈಸಿದರು. ಆತನಿಗೆ ಅಗತ್ಯ ಚಿಕಿತ್ಸೆ ನೀಡಿ ಹುಟ್ಟೂರಿಗೆ ಕಳುಹಿಸಲು ಚಿಂತಿಸಲಾಗುತ್ತಿದೆ.