ಮಂಗಳೂರು, ಡಿ 25 (MSP): ಶಾಂತಿ ಸೌಹಾರ್ದದ ಸಂಕೇತದಂತಿರುವ ಕ್ರಿಸ್ಮಸ್ ಮತ್ತೆ ಬಂದಿದೆ ಎಂದಿನಂತೆ ಕ್ರಿಸ್ತನ ಜನನದ ನೆನಪನ್ನು ಸಾರುವ ಗೋದಲಿಗಳು ಸಿದ್ದವಾಗಿದೆ. ಕ್ರಿಸ್ಮಸ್ ಟ್ರೀಗಳು ಅಲಂಕೃತಗೊಂಡಿವೆ. ಸಾಂತಾಕ್ಲಾಸ್ ಗಾಗಿ ಮಕ್ಕಳು ಮನೆ ಮುಂದೆ ಕಾಯುವಂತಾಗಿದೆ. ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಕರಾವಳಿಯ ಎಲ್ಲೆಡೆ ಆಚರಿಸಲಾಗುತ್ತಿದೆ.
Rosario Cathedral
St Sebastian Church, Bendore
Holy Cross Church, Kulshekar
St Lawrence Church, Bondel
ರಾಜ್ಯದಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಇರುವುದು ಕರಾವಳಿಯಲ್ಲಿ. ಹೀಗಾಗಿ ಈ ಭಾಗದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ರಂಗೇರಿದೆ. ಕ್ರಿಸ್ಮಸ್ ಪ್ರಯುಕ್ತ ಚರ್ಚ್ ಗಳಲ್ಲಿ ಬಲಿಪೂಜೆ, ವಿಶೇಷ ಪ್ರಾರ್ಥನೆಗಳು ನಡೆಯುತ್ತಿದೆ. ಪ್ರತಿಯೊಂದು ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿದೆ. ಕುಸ್ವಾರ್ ತಯಾರಿ, ಗೋದಲಿ ನಿರ್ಮಾಣ, ನಕ್ಷತ್ರ ದೀಪಗಳ ಅಲಂಕಾರ ಸೇರಿದಂತೆ ಕರಾವಳಿಯಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬವೆಂದರೆ ಶಾಂತಿ, ಪ್ರೀತಿ ದೀನತೆಯ ಹಬ್ಬ. ಸಡಗರ – ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಪರಸ್ಪರ ಪ್ರೀತಿ – ಶಾಂತಿ ಸಂದೇಶವನ್ನು ಈ ಹಬ್ಬ ನೀಡುತ್ತದೆ. ಸರ್ವ ಧರ್ಮದ ಸಮ್ಮಿಲನ ಕ್ರಿಸ್ಮಸ್ ಹಬ್ಬದ ದಿನ ಭಾಸವಾಗುತ್ತದೆ. ಎಲ್ಲಾ ರೀತಿಯ ಭೇದವನ್ನು ಮರೆತು ಎಲ್ಲರೂ ಒಂದುಗೂಡಿ ಈ ಹಬ್ಬವನ್ನು ಆಚರಿಸುತ್ತಾರೆ.
ಜಗತ್ತನ್ನು ರಕ್ಷಿಸಲು ಬಂದವರು ಪ್ರಭು ಯೇಸು ಕ್ರಿಸ್ತರು. ಈ ದೇವ ಮಾನವನಿಗೆ ಕೃತಜ್ಞತೆ ಹೇಳುವುದು ಕ್ರಿಸ್ಮಸ್ ಹಬ್ಬದ ದಿನದ ವಿಶೇಷವಾಗಿದೆ. ಲೋಕಕ್ಕೆ ಬೆಳಕನ್ನು ನೀಡಲು ಬರುವ ಕ್ರಿಸ್ತ ಜಗದಗಲಕ್ಕೆ ಸಂತೋಷವನ್ನು ತಂದ. ಕ್ರಿಸ್ತ ಹುಟ್ಟಿದ್ದು ಕತ್ತಲೆಯ ದನದ ಕೊಟ್ಟಿಗೆಯಲ್ಲಾದರೂ, ಅವರು ನೀಡಿದ ಬೆಳಕು ಜಗದ ದೀವಿಗೆಯಾಗಿದೆ ಎಂಬ ಸಂದೇಶದೊಂದಿಗೆ ಕರಾವಳಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.