ಮಂಗಳೂರು,ಡಿ 27 (MSP): ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತರಾಗಿ ನಂತರ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪಡೀಲ್ನ ಧನರಾಜ್ ಹಾಗೂ ಧೀರಜ್ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2015 ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ಈ ಆರೋಪಿಗಳು ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.ಮಂಗಳೂರು ದಕ್ಷಿಣ ಠಾಣಾ ಪ್ರಭಾರ ಇನ್ಸ್ಪೆಕ್ಟರ್ ಕೆ.ಎಂ.ಶರೀಫ್ ನಿರ್ದೇಶನದಂತೆ ಎಎಸ್ಐ ಚಂದ್ರಶೇಖರ ಮತ್ತು ಸಿಬ್ಬಂದಿ ಸೂರಜ್, ಭಾಸ್ಕರ, ಸಿದ್ಧಣ ಗೌಡ ಅವರು ಆರೋಪಿಗಳನ್ನು ಕಂಕನಾಡಿ ರೈಲ್ಪೆ ನಿಲ್ದಾಣದ ಬಳಿ ಬುಧವಾರ ಬಂಧಿಸಿದ್ದಾರೆ.