ಮಂಗಳೂರು, ಡಿ 27(SM): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಹಾಗೂ ಯೂತ್ ರೆಡ್ಕ್ರಾಸ್, ಪರಿಸರ ಸಂಘದ ವತಿಯಿಂದ ಜೀವವೈವಿಧ್ಯದಲ್ಲಿ ಪ್ರಸ್ತುತ ಪ್ರವೃತ್ತಿಗಳು ಎನ್ನುವ ವಿಚಾರದಲ್ಲಿ ಕಾರ್ಯಾಗಾರ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಕಿರಣ್ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಈಶ್ವರ ಪ್ರಸಾದ್ ಪಾಲ್ಗೊಂಡು ಮಾಹಿತಿ ನೀಡಿದರು. ಜೀವವೈವಿಧ್ಯತೆಯಲ್ಲಿ ಪ್ರಾಮುಖ್ಯತೆಗಳು ಮತ್ತು ಅವುಗಳ ಉಳಿಸುವಿಕೆಯಿಂದ ಆಗಬಹುದಾದ ವಿಚಾರಗಳ ಸಮಗ್ರ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರೊ. ಜಯವಂತ ನಾಯಕ್ ಕಾರ್ಯಾಗಾರ ಉದ್ಘಾಟಿಸಿದರು. ಮಂಗಳೂರು ವಿವಿ ಪ್ರಾಣಿಶಾಸ್ತ ವಿಭಾಗದ ವಿದ್ಯಾರ್ಥಿ ದೀಪಕ್, ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ವಿನೀತ್ಕುಮಾರ್ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಡಾ. ನಾಗರತ್ನ ಕೆ ಎ, ಯೂತ್ ರೆಡ್ಕ್ರಾಸ್ನ ಸಂಚಾಲಕಿ ಡಾ. ಮೀನಾಕ್ಷಿ, ಉಪನ್ಯಾಸಕಿ ಸೃಜನ ಮೊದಲಾದವರಿದ್ದರು. ಕಾಲೇಜಿನ ಸುಮಾರು 110 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ಉಪನ್ಯಾಸದ ಪ್ರಯೋಜನ ಪಡೆದರು.