ಮಂಗಳೂರು, ಡಿ,28 (MSP): ಯುವಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ನಾಗುರಿಯಲ್ಲಿ ಡಿ.27 ರ ಬುಧವಾರ ಸಂಜೆ ನಡೆದಿದೆ. ರಿತೇಶ್ ಕೊಟ್ಟಾರಿ ಹಲ್ಲೆಗೊಳಗಾದ ಯುವಕ.
ರಿತೇಶ್ ಕೊಟ್ಟಾರಿ ಹಲ್ಲೆಗೊಳಗಾದ ಯುವಕ ಮತ್ತು ರಕ್ಷಿತ್ ಕೊಟ್ಟಾರಿ (ಹಲ್ಲೆ ಮಾಡಿದಾತ)
ರಿತೇಶ್, ನಾಗುರಿಯಲ್ಲಿ ರುವ ತನ್ನ ಅಜ್ಜಿ ಮನೆಯಲ್ಲಿರುವಾಗ ಸ್ಥಳಕ್ಕೆ ಬಂದ ರಕ್ಷಿತ್ ಕೊಟ್ಟಾರಿ ಮತ್ತು ಆತನ ತಂಡ ರಕ್ಷಿತ್ ಕೊಟ್ಟರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ತುಣುಕುಗಳನ್ನು ನೀನು ಫಾರ್ವಾಡ್ ಮಾಡುತ್ತಿ ಎಂದು ಆರೋಪಿಸಿ ಎದೆ ಭಾಗಕ್ಕೆ ಹಾಗೂ ,ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ರಿತೇಶ್ ಕೊಟ್ಟಾರಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಘಟನೆ ವಿರುದ್ದ ರಿತೇಶ್ ಕೊಟ್ಟಾರಿ ಅವರು ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ಯುವಕನೊಬ್ಬನಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆ ಬಗ್ಗೆ ರಕ್ಷಿತ್ ಕೊಟ್ಟಾರಿ ಗ್ಯಾಂಗ್ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಕ್ಷಿತ್ ಗ್ಯಾಂಗ್ ವಿರುದ್ದ ಧೀರಜ್( 26) ಎಂಬವರು ದೂರು ದಾಖಲಿಸಿದ್ದರು.
ಧೀರಜ್ ಪಿವಿಎಸ್ ಬಳಿ ಇರುವ ಸಿಟಿ ಪ್ಲಾಜಾ ಬಿಲ್ಡಿಂಗ್ ನಲ್ಲಿರುವ ಲ್ಯಾಪ್ ಟಾಪ್ ಶೋರೂಂ ನಲ್ಲಿ ಸರ್ವಿಸ್ ಮತ್ತು ಸೇಲ್ಸ್ ಕೆಲಸವನ್ನು ಮಾಡುತ್ತಿದ್ದ ವೇಳೆ ರಕ್ಷಿತ್ ಕೊಟ್ಟಾರಿ, ರೋಹಿತ್ ಶೆಟ್ಟಿ, ಸೂರಜ್ ಕೊಟ್ಟಾರಿ ಮತ್ತು ದಿನೇಶ್ ಎಂಬವರು ಬಂದು ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಧೀರಜ್ ದೂರಿನಲ್ಲಿ ವಿವರಿಸಿದ್ದರು.