ಉಡುಪಿ, ಡಿ 28 (MSP): ಹಿಂದೂ ಜನಜಾಗೃತಿ ಸಮಿತಿಯೂ, ಹಿಂದೂ ಸಂಸ್ಕೃತಿಗನುಸಾರ ಹೊಸವರ್ಷವನ್ನು ಚೈತ್ರ ಶುಕ್ಲ ಪ್ರತಿಪದೆಯ ದಿನ ಅಂದರೆ ಯುಗಾದಿಯಂದು ಆಚರಿಸಬೇಕು ಎಂದು ಹಿಂದೂಗಳಿಗೆ ಕರೆನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಉಡುಪಿ ಹಿಂದೂ ಜನಜಾಗೃತಿ ಸಮಿತಿಯೂ, ಜನವರಿ ಒಂದರಂದು ಕ್ರೈಸ್ತರ ಹೊಸವರ್ಷಾರಂಭವಾಗುತ್ತದೆ. ದೇಶದಲ್ಲಿನ ಕ್ರೈಸ್ತ ಬಾಂಧವರು ಅವರ ಹಬ್ಬವನ್ನು ಆವಶ್ಯಕವಾಗಿ ಆಚರಿಸಲಿ. ಹಿಂದುಗಳ ಹಬ್ಬ ಯುಗಾದಿಗೆ ತನ್ನದೇ ಆದ ಐತಿಹಾಸಿಕ ಕಾರಣಗಳಿವೆ, ನೈಸರ್ಗಿಕ ಮತ್ತು ಆಧ್ಯಾತ್ಮಿಕ ರೀತಿನೀತಿಗಳು ಇವೆ. ಜನವರಿ 1 ರಂದು ಸೂಕ್ತ ಕಾರಣಗಳಿಲ್ಲ. ಡಿಸೆಂಬರ್ 31 ರ ಮಧ್ಯರಾತ್ರಿ ಮದ್ಯದ ಅಮಲಿನಲ್ಲಿ, ಕೋಲಾಹಲವೆಬ್ಬಿಸುತ್ತಾ, ತಪ್ಪು ಆಚರಣೆ ಮಾಡುತ್ತಾ ಹೊಸವರ್ಷಾರಂಭ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಮದ್ಯದ ಗುಟುಕು ಮತ್ತು ಸಿಗರೇಟಿನ ಸೇವನೆ ಯಿಂದ ನೂತನ ವರ್ಷವನ್ನು ಆಚರಿಸುವುದು ಸರಿಯಲ್ಲ. ಹೊಸವರ್ಷಾರಂಭ ಈ ತೀತಿ ಆಚರಿಸಿದರೆ ಸಾಮಾಜಿಕ ನೈತಿಕತೆ ಕ್ಷೀಣಿಸುತ್ತದೆ, ಕಾನೂನು-ಸುವ್ಯವಸ್ಥೆ ಹಾಳುಗೆಡವುತ್ತದೆ ಅಲ್ಲದೆ ಯುವಪೀಳಿಗೆಗೆಯನ್ನು ವಿನಾಶದಂಚಿಗೆ ಕೊಂಡೊಯ್ಯುವುತ್ತದೆ.
ಇಂದು ದೇಶದಲ್ಲಿ ಕ್ರೈಸ್ತ ಮಿಶನರಿಗಳ ಶಾಲೆಗಳ್ಲಿ ಬೈಬಲ್ ಬೋಧಿಸಲಾಗುತ್ತಿದೆ. ಮದರಸಾದಲ್ಲಿ ಕುರಾನ್ ಕಲಿಸಲಾಗುತ್ತದೆ; ಆದರೆ ಹಿಂದೂಗಳಿಗೆ ಹಿಂದೂಗಳ ಯಾವುದೇ ಧರ್ಮಗ್ರಂಥವನ್ನು ಯಾವುದೇ ಶಾಲೆ-ಮಹಾವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿಲ್ಲ. ಅದರ ಪರಿಣಾಮದಿಂದ ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗುತ್ತಿಲ್ಲ. ದೇಶದಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಆದರೆ ಗೌರವಿಸುವುದು ಮತ್ತು ಅನುಕರಣೆ ಮಾಡುವುದು ಇವೆರಡೂ ಬೇರೆಬೇರೆಯಾಗಿವೆ.ಒಂದು ಪಂಥದ ಹಬ್ಬ-ಉತ್ಸವಗಳನ್ನು ಆಚರಿಸುವುದು ಅಂದರೆ ಆ ಪಂಥದ ಅಂಧಾನುಕರಣೆ ಮಾಡುವುದಾಗಿದೆ. ಇದರ ಅರ್ಥ ಪಂಥದ ಶಿಕ್ಷಣ ಮಾನಸಿಕ ಸ್ತರದಲ್ಲಿ ಸ್ವೀಕರಿಸಿದಂತಾಗುತ್ತದೆ. ಇದು ಒಂದು ರೀತಿ ಮಾನಸಿಕ ಮತಾಂತರವೇ ಹೇಳಲಾಗುವುದು. ಇಂದು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರರಾಗುತ್ತಿದೆ.ಮುಂಬೈ ಸಮೀಪದ ಉಲ್ಲಾಸನಗರದಲ್ಲಿ 28000 ಕುಟುಂಬಗಳು ಅಂದರೆ 1 ಲಕ್ಷ ಹಿಂದೂಗಳು ಕ್ರೈಸ್ತರಾಗಿದ್ದಾರೆ. ಹಿಂದೂಗಳ ಮತಾಂತರ ಆರಂಭವು ಇಂತಹ ಕ್ರೈಸ್ತ ಹಬ್ಬಗಳ ಅಂಧಾನುಕರಣೆ ಮಾಡುವುದರಿಂದ ಆಗುತ್ತದೆ . ಇದನ್ನು ಗಮನದಲ್ಲಿರಿಸಿ ಹಿಂದೂಗಳು ಡಿಸೆಂಬರ್ 31ರಂದು ಆಚರಿಸದೇ ಯುಗಾದಿಗೆ ವರ್ಷಾರಂಭದಿನವೆಂದು ಆಚರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಈ ಬಗ್ಗೆ ದೇಶ ಹಾಗೂ ಜಿಲ್ಲೆಯಾದ್ಯಂತ ಹಿಂದೂ ಜನಜಾಗೃತಿ ಸಮಿತಿ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮಾಡುತ್ತದೆ. ಕರಪತ್ರಗಳ ವಿತರಣೆ, ಭಿತ್ತಿಪತ್ರ ಹಚ್ಚುವುದು, ಫ್ಲೆಕ್ಸ್ ಫಲಕಗಳ ಪ್ರದರ್ಶನ ಏರ್ಪಡಿಸುವುದು, ಗ್ರಂಥಗಳ ಪ್ರದರ್ಶನ ಹಾಕುವುದು, ಜಾಗೃತಿ ಮೂಡಿಸುವ ವ್ಯಾಖ್ಯಾನಗಳ ಆಯೋಜನೆ ಮಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಶಾಲೆಗಳಲ್ಲಿ ವ್ಯಾಖ್ಯಾನಗಳನ್ನು ನಡೆಸಲಾಗಿದೆ, ತಪ್ಪು ಆಚರಣೆ ನಿಲ್ಲಿಸಲು ಜಿಲ್ಲಾಧಿಕಾರಿ-ಪೊಲೀಸ್ ಆಡಳಿತಕ್ಕೆ ಮನವಿ ನೀಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.