ಕಾಸರಗೋಡು,ಡಿ 28 (MSP): ಜಿಲ್ಲೆಯಿಂದ 14 ಮಂದಿಯನ್ನು ಐಸಿಸ್ ಗೆ ನೇಮಕ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎಯಿಂದ ವಯನಾಡು ಕಲ್ಪೆಟ್ಟದ ಹಬೀಬ್ ರಹ್ಮಾನ್ (೨೫ ) ಎಂಬಾತನನ್ನು ಗುರುವಾರ ಕೊಚ್ಚಿಯ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಾಸರಗೋಡು ಐಸಿಸ್ ರಿಕ್ರ್ಯೂಟ್ ಮೆಂಟ್ ಪ್ರಕರಣದ 17 ನೇ ಆರೋಪಿ ಹಬೀಬ್ ರಹ್ಮಾನ್ ಕೊಚ್ಚಿಯ ಪ್ರತ್ಯೇಕ ಎನ್ಐಎ ನ್ಯಾಯಾಲಯ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಎನ್ಐಎ ಐದು ದಿನಗಳ ಕಸ್ಟಡಿ ಅರ್ಜಿಯನ್ನು ಸೋಮವಾರ ನ್ಯಾಯಾಲಯ ಪರಿಗಣಿಸಲಿದೆ.
ಪೆಡನ್ನದಿಂದ 2016 ರಲ್ಲಿ ಐಸಿಸ್ ಗಾಗಿ ಅಪಘಾನಿಸ್ತಾನಕ್ಕೆ ತೆರಳುವಲ್ಲಿ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ದಾಖಲಿಸಿತ್ತು. ಈತ ಇನ್ನೊಬ್ಬ ಆರೋಪಿ ನಾಸಿದ್ದುಲ್ ಹಂಸಫರ್ ಮತ್ತು ಹಬೀಬ್ ರಹ್ಮಾನ್ ಅಪಘಾನಿಸ್ತಾನಕ್ಕೆ ತೆರಳಿದ್ದವರೊಂದಿಗೆ ನಿರಂತರ ವಾಟ್ಸ್ ಆಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದನೆನ್ನಲಾಗಿದೆ. ಪ್ರಮುಖವಾಗಿ ಅಬ್ದುಲ್ ರಶೀಲ್ ಅಬ್ದುಲ್ಲ ಮತ್ತು ಅಶ್ಫಾಕ್ ಮಜೀದ್ ಜತೆ ಸಂಪರ್ಕ ಹೊಂದಿದ್ದರು. ಅಲ್ಲದೆ 2017 ರಲ್ಲಿ ಐಸಿಸ್ ಕೇಂದ್ರಕ್ಕೆ ತೆರಳಲು ಮಸ್ಕತ್ ಮೂಲಕ ತೆರಳುವ ಸಂದರ್ಭದಲ್ಲಿ ಬಂಧಿತನಾಗಿ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು. ಆರೋಪಿಯನ್ನು ಎನ್ಐಎ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.