ಹುಬ್ಬಳ್ಳಿ, ಅ 21: ಟಿಪ್ಪು ಸುಲ್ತಾನ್ ಒಬ್ಬ ದ್ರೋಹಿ. ರಾಜ್ಯದ ಇತಿಹಾಸವನ್ನು ಅಳಿಸಿ ಹಾಕಿದ ಟಿಪ್ಪುವಿನ ಜಯಂತಿ ರದ್ದುಗೊಳಿಸಲಾಗುವುದು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ನಾಡು ಮತ್ತು ಕನ್ನಡಕ್ಕೆ ದ್ರೋಹ ಮಾಡಿದ್ದಾನೆ. ಕೊಡಗು ಜಿಲ್ಲಾ ಪಂಚಾಯತ್ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬಾರದು ಎಂದು ಹೇಳಿದರೂ ರಾಜ್ಯ ಸರಕಾರ ಅದನ್ನು ಒಪ್ಪಲಿಲ್ಲ. ಇದರಿಂದ ರಾಜ್ಯದಲ್ಲಿ ಪ್ರತಿ ವರ್ಷ ಶಾಂತಿ ಕದಡುತ್ತಿದೆ ಎಂದು ಹೇಳಿದರು.
ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಲಾಗುವುದು ಎಂದು ಅಭಿಪ್ರಾಯಪಟ್ಟರು.