ಬೆಂಗಳೂರು,ಡಿ 28 (MSP): ಸಚಿವ ಸಂಪುಟದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡಿದ್ದು ಇದೀಗ ಪರಮೇಶ್ವರ ಪರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬ್ಯಾಟಿಂಗ್ ನಡೆಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಡಾ.ಜಿ ಪರಮೇಶ್ವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ನಿರ್ವಹಿಸುತ್ತಿದ್ದ ಗೃಹ ಖಾತೆಯನ್ನು ವಾಪಸ್ ಪಡೆದದ್ದು ಸರಿಯಲ್ಲ ಎಂದು ಶುಕ್ರವಾರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರೇವಣ್ಣ ' ಪರಮೇಶ್ವರ್ ಅವರು ದಲಿತ ನಾಯಕ. ಪರಿಶಿಷ್ಟ ಜಾತಿಯವರು ಡಿಸಿಎಂ ಆಗಿರುವುದು ಕಾಂಗ್ರೆಸ್ ನಾಯಕರಿಗೇ ಸಹಿಸಲು ಆಗುತ್ತಿಲ್ಲ' ಎಂದು ಕಿಡಿಕಾರಿದರು. ನಾನು ಗೃಹ ಇಲಾಖೆ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲಈ ರೀತಿ ಆರೋಪ ಮಾಡಿಯೇ ಕಾಂಗ್ರೆಸ್ ನಾಯಕರು ಈ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರು ಹೀಗೆ ಸಂಚು ಮಾಡಲು ಹೋದರೆ ಏಟು ತಿನ್ನುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.