ಉಡುಪಿ, ಡಿ 28 (MSP): ದೇಶದ ಚರಿತ್ರೆಯನ್ನು ಬಿಟ್ಟು ಕಾಂಗ್ರೆಸ್ ಚರಿತ್ರೆಯನ್ನು ಹೇಳಲು ಎಂದಿಗೂ ಸಾಧ್ಯವಿಲ್ಲ. ಅವು ಒಂದಕ್ಕೊಂದು ಮಿಳಿತವಾಗಿದೆ. ಹಾಗೆ ಭಾರತ ದೇಶ ಇಂದು ಅಭಿವೃದ್ಧಿಯನ್ನು ಹೊಂದಿರುವುದು ದೇಶದ ಈ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ಅನೇಕ ಭಾಷೆ, ಅನೇಕ ಸಂಸ್ಕೃತಿ, ಅನೇಕ ಜಾತಿ ಧರ್ಮಗಳನ್ನು ದೇಶ ಹೊಂದಿದ್ದರೂ ಕೂಡ ಅತ್ಯಂತ ಸಮರ್ಥವಾದ ಪ್ರಜಾಪ್ರಭುತ್ವ ದೇಶವಾಗಿ ಇಂದು ಭಾರತ ವಿಶ್ವದಲ್ಲಿ ಸ್ಥಾನವನ್ನು ಗಳಿಸಿದೆ ಎಂದಾದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ- ಅದು ಒಪ್ಪಿಕೊಂಡ ಜಾತ್ಯಾತೀತ ಸಿದ್ಧಾಂತ. ಈ ನೆಲೆಗಟ್ಟಿನಲ್ಲಿ ದೇಶ ಅಭಿವೃದ್ಧಿಯನ್ನು ಕಾಣುತ್ತಿದೆ. ಅದನ್ನು ಹಾಳುಗೆಡಹುವ ಹುನ್ನಾರ ಇಂದು ಜರಗುತ್ತಿದೆ. ದೇಶದ ಸೌಹಾರ್ದತೆಯ ನೆಲೆಗಟ್ಟು ಕುಸಿದರೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಇದಾಗದಂತೆ ನಾವು ಕಾಂಗ್ರೆಸಿಗರು ಎಚ್ಚರವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಹೇಳಿದರು.
ಅವರು ಇಂದು ಕಾಂಗ್ರೆಸ್ ಭವನದಲ್ಲಿ 134ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಅಂಗವಾಗಿ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಹಾರಾಡಿ, ಹಿರಿಯ ಸಹಕಾರಿ ದುರೀಣ ಕೃಷ್ಣರಾಜ ಸರಳಾಯ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ವಾಗ್ಲೆ ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡರಾದ ಬಿ. ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಕಿಷನ್ ಹೆಗ್ಡೆ ಕೊಳ್ಕೆಬೈಲ್, ಉದ್ಯಾವರ ನಾಗೇಶ್ ಕುಮಾರ್, ಯತೀಶ್ ಕರ್ಕೇರ, ನವೀನ್ಚಂದ್ರ ಸುವರ್ಣ, ಶಶಿಧರ ಶೆಟ್ಟಿ ಎಲ್ಲೂರು, ಸದಾಶಿವ ಕಟ್ಟೆಗುಡ್ಡೆ, ಹಬೀಬ್ ಅಲಿ, ರೆನಾಲ್ಡ್ ಪ್ರವೀಣ್ ಕುಮಾರ್, ಕೀರ್ತಿ ಶೆಟ್ಟಿ, ಜಿತೇಶ್ ಕುಮಾರ್, ದೀವ ನಂಬಿಯಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.