ಖಾಂಡುವ ಡಿ 30: ಆರು ಬೆರಳುಗಳೊಂದಿಗೆ ಜನಿಸಿದ ಮಗುವಿನ ಹೆಚ್ಚುವರಿ ಬೆರಳುಗಳನ್ನು ತುಂಡರಿಸಿದ್ದರಿಂದ ತೀವ್ರ ರಗ್ತಸ್ರಾವವಾಗಿ ಮಗು ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಾಂಡುವ ಎಂಬಲ್ಲಿ ನಡೆದಿದೆ.
ವಿವಾಹಿತೆಯಾಗಲು ಹೆಚ್ಚುವರಿ ಬೆರಳು ತಡೆಯಾಗಲಿದೆ ಎಂಬ ಜ್ಯೋತಿಷಿಯ ಮಾತುಗಳನ್ನು ನಂಬಿ ಹೆತ್ತಬ್ಬೆಯೇ ಮಗುವಿನ ಹೆಚ್ಚುವರಿ ಬೆರಳುಗಳನ್ನು ತುಂಡರಿಸಿ ಗಾಯಕ್ಕೆ ಸೆಗಣಿ ಹಚ್ಚಿದ್ದಳು. ಆದರೆ ಗಾಯದ ಮೂಲಕ ತೀವೃ ರಗ್ತಸ್ರಾವವಾಗಿ ಕೆಲವೇ ಘಂಟೆಗಳಲ್ಲಿ ಮಗು ಮೃತಪಟ್ಟಿತು ಎಂದು ಪೋಲಿಸರು ತಿಳಿಸಿದ್ದಾರೆ. ಅತಿಯಾದ ಮೂಢನಂಬಿಕೆ ಹಾಗೂ ಜ್ಯೋತಿಷಿಯ ಅಜ್ನಾನ ಈ ಘಟನೆಗೆ ಮೂಲ ಕಾರಣವೆಂದು ಹೇಳಲಾಗುತ್ತಿದೆ.
ಸುಂದರ್ ದೇವ್ ಗ್ರಾಮದಲ್ಲಿ ತಾರಾಬಾಯಿ ಎಂಬ ಮಹಿಳೆಗೆ ಡಿಸೆಂಬರ್ 22 ರಂದು ಎರಡೂ ಕೈಗಳಲ್ಲಿ ಆರು ಬೆರಳುಗಳನ್ನು ಹೊಂದಿದ ಮಗುವು ಜನಿಸಿತ್ತು. ತಕ್ಷಣ ಜ್ಯೋತಿಷಿಯನ್ನು ಸಂಪರ್ಕಿಸಿದ ಮಹಿಳೆ ಆತನ ಸಲಹೆಯಂತೆ ಮಗುವಿನ ಹೆಚ್ಚುವರಿ ಬೆರಳುಗಳನ್ನು ತುಂಡರಿಸಿ ಗಾಯಕ್ಕೆ ಸೆಗಣಿ ಹಚ್ಚಿದ್ದಳು. ಮಗು ಮೃತಪಟ್ಟ ತಕ್ಷಣ ಆಕೆಯ ಮೃತದೇಹವನ್ನು ಮಣ್ಣಲ್ಲಿ ದಫನ ಮಾಡಿದ್ದಳು. ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ಪೋಲಿಸರು ತನಿಖೆ ನಡೆಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ವೈಧ್ಯರ ಅಧಿಕೃತ ವರದಿ ಲಭಿಸಿದ ತಕ್ಷಣ ಮಗುವಿನ ತಾಯಿಯ ಹಾಗೂ ಜ್ಯೋತಿಷಿಯ ಮೇಲೆ ಯಾವ ರೀತಿಯ ಕಾನೂನು ಕ್ರಮ ತೆಗೆಯಬೇಕೆಂದು ಅಲೋಚಿಸಲಾಗುವುದು ಎಂದು ಸ್ಥಳೀಯ ಪೋಲಿಸ್ ಅಧಿಕಾರಿ ರುಚಿವರ್ಧನ್ ವರ್ಮ ತಿಳಿಸಿದ್ದಾರೆ. ಘಟನೆಯ ಕುರಿತು ಹೆರಿಗೆ ವಿಚಾರಗಳಲ್ಲಿ ಮೇಲ್ನೋಟ ವಹಿಸುವ ಸ್ಥಳೀಯ ಸರಕಾರಿ ಅಧಿಕಾರಿಗಳ ವಿರುದ್ಧ ಈಗಾಗಲೇ ತನಿಖೆಗೆ ಅದೇಶಿಸಲಾಗಿದೆ.
ಹುಟ್ಟುವಾಗಲೇ ಕಾಣಸಿಗುವ ಬೆರಳುಗಳ ಸಂಖೆಗಳ ಅಸ್ವಾಭಾವಿಕತೆಯನ್ನು ವೈಧ್ಯಶಾಸ್ತ್ರದಲ್ಲಿ ಪೋಲಿಡೆಕ್ಟ್ ಲೀ ಅಥವಾ ಹೈಪರ್ ಡೆಕ್ಟ್ ಲೀ ಎಂದು ಕರೆಯುತ್ತಾರೆ. ಯಾವುದೇ ಪ್ರತ್ಯೇಕ ಕಾರಣಗಳಿಲ್ಲದೆ ಈ ರೀತಿಯ ಅಸ್ವಾಭಾವಿಕತೆ ಹಲವರಲ್ಲಿ ಕಂಡುಬರುತ್ತದೆ. ಅಪೂರ್ವವಾಗಿ ಕೆಲವರಲ್ಲಿ ಇದು ವಂಶೀಯವಾಗಿ ಕಾಣಸಿಗುತ್ತದೆ. ಇಲ್ಲಿ ನಂಬಿಕೆ ಹಾಗೂ ಧಾರ್ಮಿಕ ಆಚಾರಗಳಿಗೆ ಯಾವುದೇ ಪ್ರಸಕ್ತಿಯಿಲ್ಲ ಎಂದು ವೈಧ್ಯಕೀಯ ಲೋಕದ ಅಭಿಪ್ರಾಯ.