ಕೊಚ್ಚಿ, ಡಿ31(SS): ಇತಿಹಾಸ ಪ್ರಸಿದ್ಧ ಕ್ಷೇತ್ರ ಶಬರಿಮಲೆ ಮಕರ ಸಂಕ್ರಮಣ ಉತ್ಸವಕ್ಕಾಗಿ ಸಜ್ಜಾಗಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ಕ್ಷೇತ್ರದತ್ತ ಧಾವಿಸಿ ಬರುತ್ತಿದೆ.
ಎಲ್ಲ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಬರಿಮಲೆ ಬಿಗುವಿನ ವಾತಾವರಣದಿಂದ ಕೂಡಿದೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಹಾಗೂ ಪೊಲೀಸರಿಂದ ತುಂಬಿಕೊಂಡಿದೆ. ಈ ಹಿಂದೆ ಹಲವಾರು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮಾಡಿದ್ದ ವಿಫಲ ಯತ್ನ, ಅಯ್ಯಪ್ಪ ಭಕ್ತರಿಂದ ತೀರ್ವ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಹೆಚ್ಚು ಬಂದೋಬಸ್ತ್ ನಿಯೋಜಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸುಮಾರು 12ಕ್ಕೂ ಅಧಿಕ ಮಂದಿ ಮಹಿಳೆಯರು ದೇವಳದ ಪ್ರವೇಶಕ್ಕೆ ವಿಫಲ ಯತ್ನ ನಡೆಸಿದ್ದರು.
ಜ.14ರಂದು ಮಕರ ಸಂಕ್ರಾಂತಿ ಉತ್ಸವ ನಡೆಯಲಿದ್ದು, ಜ.20ರ ಸಂಜೆ 7ಕ್ಕೆ ದೇವಾಲಯದ ಬಾಗಿಲು ಮತ್ತೆ ಮುಚ್ಚಲಾಗುತ್ತದೆ.