ಮಂಗಳೂರು, ಡಿ31(SS): ನಗರದಲ್ಲಿ ಹೊಸ ವರ್ಷವನ್ನು ಎದುರುಗೊಳ್ಳಲು ಯುವಜನತೆ ಹಾತೊರೆಯುತ್ತಿದ್ದು, ಕಡಲ ನಗರಿ ಮಂಗಳೂರು ವಿದ್ಯುತ್ ದೀಪಗಳಿಂದ ಜಗಮಗಿಸತೊಡಗಿದೆ.
ನಗರದ ಬಹುತೇಕ ಕಡೆಗಳಲ್ಲಿ ಇರುವ ಪಂಚತಾರಾ ಹೊಟೇಲ್ಗಳಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪೂರ್ವ ತಯಾರಿ ನಡೆಸಲಾಗಿದ್ದು, ದೂರದ ಮುಂಬೈ, ಚೆನ್ನೈನ ಸಂಗೀತ ಕಲಾವಿದರನ್ನು, ಡಿಜೆಗಳನ್ನು ಆಹ್ವಾನಿಸಲಾಗಿದೆ.
ಇಂದು ರಾತ್ರಿ 12 ಗಂಟೆಯವರೆಗೂ ಪಾರ್ಟಿಗಳಲ್ಲಿ ಯುವಜನತೆ ಮೋಜು, ಮಸ್ತಿಯಲ್ಲಿ ತಲ್ಲೀನರಾಗಲಿದ್ದಾರೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯುವಜನತೆ ಮೈಮರೆಯದೇ ಯಾವುದೇ ಅಹಿತಕರ ಸನ್ನಿವೇಶಗಳಿಗೆ ಎಡೆಮಾಡದೇ ಹೊಸವರ್ಷಾಚರಣೆ ನಡೆಸುವಂತೆ ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್, ಫೇಸ್ಬುಕ್ಗಳಲ್ಲಿ ಶುಭಾಶಯಗಳ ವಿನಿಮಯ ಶುರುವಾಗಿದೆ.