ದೆಹಲಿ, ಡಿ 31(SM): ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಜನತೆಗೆ ಹೊಸ ವರ್ಷದ ಉಡುಗೊರೆ ನೀಡಲಾಗಿದೆ. ಅಡುಗೆ ಅನಿಲದ ದರದಲ್ಲಿ ಇಳಿಕೆಗೊಳಿಸಿ ಆದೇಶ ನೀಡಲಾಗಿದೆ.
ಸಬ್ಸಿಡಿ ಸಹಿತ ಅಡುಗೆ ಅನಿಲಕ್ಕೆ 5.91 ರೂಪಾಯಿ ಇಳಿಕೆಗೊಳಿಸಲಾಗಿದೆ. ಇನ್ನು ಸಬ್ಸಿಡಿ ರಹಿತ ಅಡುಗೆ ಅನಿಲಕ್ಕೆ 120 ರೂಪಾಯಿ ಇಳಿಕೆಗೊಳಿಸಲಾಗಿದೆ. ನೂತನ ದರ ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ.
ಇನ್ನು ತಿಂಗಳ ಹಿಂದೆಯಷ್ಟೇ ಅಡುಗೆ ಅನಿಲದ ದರವನ್ನು ಕೇಂದ್ರ ಸರಕಾರ ಇಳಿಕೆಗೊಳಿಸಿತ್ತು. ಇದೀಗ ಮತ್ತೆ ಕಡಿತಗೊಳಿಸುವ ಮೂಲಕ ಗೃಹಣಿಯರ ಮೊಗದಲ್ಲಿ ಮಂದಹಾಸ ಮೂಡಿದೆ.