ಬೆಂಗಳೂರು ಜ 01(MSP): 2019 ನೇ ಲೋಕಸಭಾ ಚುನಾವಣೆಯ ಕಣಕ್ಕೆ ತಾವು ಸ್ಪರ್ಧಿಸುವುದಾಗಿ ನಟ ಪ್ರಕಾಶ್ ರೈ ಘೋಷಿಸಿಕೊಂಡಿದ್ದಾರೆ.ಅವರು ಸೋಮವಾರದ ಮಧ್ಯರಾತ್ರಿ ಟ್ವೀಟ್ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿ, ಚುನಾವಣೆಗೆ ಸ್ವರ್ಧಿಸುವ ವಿಚಾರವನ್ನು ತಿಳಿಸಿದ್ದಾರೆ.
‘ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. ಒಂದು ನೂತನ ಪ್ರಾರಂಭ. ಜವಾಬ್ದಾರಿ ಹೆಚ್ಚಿದೆ. ಎಲ್ಲರ ಬೆಂಬಲದೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಯಾವ ಕ್ಷೇತ್ರ ಮುಂತಾದ ಕುರಿತು ಮಾಹಿತಿಯನ್ನು ಶೀಘ್ರದಲ್ಲೇ ನೀಡಲಿದ್ದೇನೆ. ಆಬ್ ಕಿ ಬಾರ್ ಜನತಾ ಕಿ ಸರ್ಕಾರ್#ಸಿಟಿಜನ್ ವಾಯ್ಸ್ #ಜಸ್ಟ್ ಆಸ್ಕಿಂಗ್ " ’ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.