ಮಂಗಳೂರು,ಜ 01(MSP): ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಮರಳು ಮಾಫಿಯಾ ಪ್ರಕರಣದಲ್ಲಿ ಆರೋಪಿಯನ್ನು ಸುಮಾರು ೬ ಕಿ,ಮಿ ಬೆನ್ನಟ್ಟಿ ಹಿಡಿದು ಬಂಧಿಸಿದ್ದ ಐಪಿಎಸ್ ಪೊಲೀಸ್ ಅಧಿಕಾರಿ ಬಿ.ಎಂ ಲಕ್ಷ್ಮೀಪ್ರಸಾದ್ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಕಸ್ತೂರಿನಗರ ನಿವಾಸಿಯಾಗಿರುವ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಆರ್.ವಿ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ. ಸಾಫ್ಟ್ ವೇರ್ ಎಂಜಿನಿಯರಿಂಗ್ ಆಗಿದ್ದ ಅವರು ಎಚ್.ಪಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಮಾತ್ರವಲ್ಲ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗ ಅವರದಾಗಿತ್ತು. ಆದರೂ ದೇಶಸೇವೆ ಮಾಡಬೇಕು ಎನ್ನುವ ಮಹದಾಸೆ ಅವರಲ್ಲಿತ್ತು. ಆದರೆ ಐ ಎ ಎಸ್ / ಐಪಿಎಸ್ ಅಧಿಕಾರಿಯಾಗಬೇಕೆಂಬ ಮಹದಾಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿದ್ದರು. ಕೈತುಬಾ ಸಂಬಳ ಬರುತ್ತಿದ್ದ ಐಟಿ ಕಂಪನಿ ಉದ್ಯೋಗ ತೊರೆದು ೨೦೧೪ ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇರಿದ್ದು ಇವರ ವಿಶೇಷ.