ನವದೆಹಲಿ, ಜ 01(MSP): ಕಾಂಗ್ರೆಸ್ಗೆ ಇಟಲಿ ದೇಶದ ಮಹಿಳೆಯ ಬಗ್ಗೆ ಮಾತ್ರ ಕಾಳಜಿ. ಅದನ್ನು ಬಿಟ್ಟು ಮುಸ್ಲಿಂ ಮಹಿಳೆಯರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು 'ನಾವು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡಿಸಲು ನಾವು ಸಿದ್ದರಿದ್ದೇವೆ, ಆದರೆ ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಯನ್ನುಂಟು ಮಾಡುತ್ತಿದೆ ಎಂದರು.
ರಾಜ್ಯ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಪಾಸು ಮಾಡಲು ಸರ್ಕಾರದ ಮಾಡಿದ ಪ್ರಯತ್ನವನ್ನು ವಿರೋಧ ಪಕ್ಷಗಳು ಜತೆಯಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷಗಳು ಮಸೂದೆ ಪಾಸು ಮಾಡಲು ಬಿಡದೆ ಕೇವಲ ಗದ್ದಲ ಸೃಷ್ಟಿ ಮಾಡಿತು ಎಂದುನಮಗೆ ಹೇಳುವುದಕ್ಕೆ ಬೇಸರವಾಗುತ್ತದೆ. ಕಾಂಗ್ರೆಸ್ ಗೆ ಮುಸ್ಲಿಂ ಮಹಿಳೆಯರ ಬಗ್ಗೆ ಚಿಂತೆ ಇಲ್ಲ ಕೇವಲ ಇಟಲಿ ಮಹಿಳೆಯ ಬಗ್ಗೆ ಮಾತ್ರ ಚಿಂತೆ ಎಂದು ಲೇವಡಿ ಮಾಡಿದ್ದಾರೆ.