ತಿರುವನಂತಪುರ,ಜ 02(MSP): ಕೊನೆಗೂ ಶಬರಿಮಲೆಗೆ 50 ವರ್ಷಕ್ಕಿಂತ ಕೆಳಗಿನ ಇಬ್ಬರು ಮಹಿಳೆಯರು ಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ಬಿಂದು ಹಾಗೂ ಕನಕದುರ್ಗ ಇಬ್ಬರೂ ಮಹಿಳೆ ಭಕ್ತರು ಅಯ್ಯಪ್ಪನ ಸನ್ನಿದಿ ಮುಂಜಾವ ದೇಗುಲ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.1 ರ ಮಧ್ಯರಾತ್ರಿ ಶಬರಿಮಲೆ ಏರಲು ಆರಂಭಿಸಿದ್ದ ಭಕ್ತೆಯರು ನಸುಕಿನ ಜಾವ 3.45ಕ್ಕೆ ದೇಗುಲ ತಲುಪಿದ್ದು, ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ ಎನ್ನಲಾಗಿದೆ. ಮಫ್ತಿಯಲ್ಲಿದ್ದ ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರ ತಂಡ ಮಹಿಳೆಯರಿಗೆ ಭದ್ರತೆ ಎನ್ನಲಾಗಿದೆ.
ಇದಲ್ಲದೆ ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಧೃಡಪಡಿಸಿದ್ದಾರೆ. ಮಹಿಳೆಯರಿಬ್ಬರು ದೇವಾಲಯ ಪ್ರವೇಶಿಸಿದ ಹಿನ್ನಲೆಯಲ್ಲಿ ಅಯ್ಯಪ್ಪ ಭಕ್ತ ವಲಯದಲ್ಲಿ ಆಕ್ರೋಶ ಬುಗಿಲೆದಿದ್ದೆ.