ಬೆಂಗಳೂರು, ಜ 02(MSP): ಬಿಂದು ಹಾಗೂ ಕನಕದುರ್ಗ ಎನ್ನುವ ಇಬ್ಬರು ಹೆಣ್ಣು ಮಕ್ಕಳಿಗೆ ದೇವರನ್ನು ನೋಡುವ ಯೋಗ ಸಿಕ್ಕಿದ್ದರಿಂದ ಶಬರಿಮಲೆಗೆ ಪ್ರವೇಶಿಸಿದ್ದಾರೆ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. ಇವರು 50 ವರ್ಷಕ್ಕಿಂತ ಒಳಗಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ ದೇಗುಲ ಪ್ರವೇಶಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಬರಿಮಲೆ ಪ್ರವೇಶಿಸಲು ಕಾನೂನಿನ ಪ್ರಕಾರವೇ ಅವರಿಗೆ ಅವಕಾಶ ದೊರಕಿದೆ. ಭಗವಂತನನ್ನು ನೋಡಲು ಅವರಿಬ್ಬರು ಪುಣ್ಯ ಮಾಡಿದ್ದಾರೆ ಎಂದಿದ್ದಾರೆ.
ಬಹುಸಂಖ್ಯೆಯಲ್ಲಿರುವ ಭಕ್ತರ ಮನಸ್ಸಿಗೆ ಘಾಸಿ ಮಾಡಿ ಅಯ್ಯಪ್ಪ ಸನ್ನಿದಿ ಪ್ರವೇಶಿಸಿದ್ದು ಸರಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಬಲತ್ಕಾರವಾಗಿ ಯಾವುದೋ ಬೇರೆ ಜನಾಂಗದವರು ದೇಗುಲವನ್ನು ಪ್ರವೇಶಿಸಿದಲ್ಲ. ಹಿಂದೂಗಳು ದೇವಸ್ಥಾನಕ್ಕೆ ಹೋಗೋದರಲ್ಲಿ ತಪ್ಪೇನಿದೆ? ಭಗವಂತನ ಸನ್ನಿಧಾನ ನೋಡಬೇಕು ಎನ್ನೋ ಆಸೆಯಿಂದ ಅಲ್ಲಿಗೆ ಹೋಗಿದ್ದಾರೆ. ದೇವರ ಕೃಪೆಯೂ ಅವರ ಮೇಲಿತ್ತು. ಒಟ್ಟಿನಲ್ಲಿ ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೋಗಿದ್ದಾರೆ ಎಂದು ಹೇಳಿದ್ದಾರೆ.