ಉಡುಪಿ, ಜ 02(SM): ಚರ್ಚೆಹಾಗೂ ಜಗಳಕ್ಕಿಂತ ಧಾರ್ಮಿಕ ಪ್ರೊಟೋಕಾಲ್ ಅನುಸರಿಸಿ ಎಂದು ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ದೇವಾಲಯಗಳಿಗೂ ಅದರದ್ದೇ ಆದ ಧಾರ್ಮಿಕ ವಿಧಿವಿಧಾನಗಳಿರುತ್ತವೆ. ಈ ಧಾರ್ಮಿಕ ಸಂವಿಧಾನಕ್ಕೆ ನಮ್ಮ ಆಕ್ಷೇಪ ಯಾಕೆ? ಶಬರಿಮಲೆಯಲ್ಲಿ ಹೆಣ್ಮಕ್ಕಳಿಗೆ ಬಹಿಷ್ಕಾರ ಹಾಕಿಲ್ಲ. ಆದರೆ ನಿಗದಿತ ಅವಧಿಗೆ ಅವರ ಪ್ರವೇಶ ನಿರ್ಬಂಧಿಸಲಾಗಿದೆ. ಮಹಿಳೆಯರು ಭಕ್ತಿಯಿಂದ ಹೋದರೆ ಅಡ್ಡಿಯಿಲ್ಲ. ಸಂಪ್ರದಾಯ ಧಿಕ್ಕರಿಸಿ ಹೋಗುವುದು ಸರಿಯಲ್ಲ ಎಂದು ಪಲಿಮಾರು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಇನ್ನು ಸುಪ್ರೀಂಕೀರ್ಟ್ ತೀರ್ಪನ್ನು ನಾವು ಬಹಿಷ್ಕರಿಸುವುದಿಲ್ಲ. ಕೋರ್ಟ್ ತನ್ನ ತೀರ್ಪನ್ನು ಪರಾಮರ್ಶೆ ನಡೆಸಲಿ.ಭಕ್ತರಿಗೆ ಸಮಸ್ಯೆಗಳಾಗದಂತೆ ಕೋರ್ಟ್ ನಿರ್ಣಯ ಕೈಗೊಳ್ಳಲಿ. ಕ್ಷೇತ್ರದ ಸಂಪ್ರದಾಯ, ನಿಯಮಾವಳಿಗಳಿಗೆ ಅವಕಾಶ ಕೊಡಲಿ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.