ಕಾಸರಗೋಡು,ಜ 03(MSP): ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧವಿದ್ದ ಹೊರತಾಗಿಯೂ ನಲವತ್ತ ಆಸುಪಾಸು ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಸಿಸಿರುವುದನ್ನು ವಿರೋಧಿಸಿ ಶಬರಿಮಲೆ ಸಂರಕ್ಷಣಾ ಸಮಿತಿ, ಬಿಜೆಪಿ ಹಾಗೂ ಸಂಘ ಪರಿವಾರ ಕರೆ ನೀಡಿರುವ ಕೇರಳ ಹರತಾಳಕ್ಕೆ ಕಾಸರಗೋಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಖಾಸಗಿ, ಸರಕಾರಿ ಸಾರಿಗೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೇ ಕೆಲವು ಖಾಸಗಿ ವಾಹನಗಳು ರಸ್ತೆಗಿಳಿದಿವೆ. ಮಂಗಳೂರು- ಕಾಸರಗೋಡು ನಡುವಿನ ಸರಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನೊಂದೆಡೆ ಬದಿಯಡ್ಕ - ಕುಂಬಳೆ ರಸ್ತೆಯ ಕನ್ಯಪ್ಪಾಡಿಯಲ್ಲಿ ಹರತಾಳ ಬೆಂಬಲಿಗರು ರಸ್ತೆಗಡ್ಡವಾಗಿ ಹಾಕಿದ್ದ ಕಲ್ಲುಗಳಿಗೆ ಸ್ಕೂಟರ್ ಬಡಿದು ಮಗುಚಿ ಬಿದ್ದ ಪರಿಣಾಮ ದಂಪತಿ ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ. ಗಾಯಗೊಂಡ ಕನ್ಯಪ್ಪಾಡಿಯ ಐತಪ್ಪ (48) ಮತ್ತು ಸುಶೀಲಾ (36) ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ .
ಇದಲ್ಲದೆ ಬದಿಯಡ್ಕ ಕಡಂಬಳ ಡಿ ವೈ ಎಫ್ ಐ ಘಟಕ ಕಚೇರಿಗೆ ಕಪ್ಪು ಆಯಿಲ್ ಎರಚಿದ ಘಟನೆ ಇಂದು ಮುಂಜಾನೆ ನಡೆದಿದೆ.