ಉಪ್ಪಳ, ಜ 03(SM): ಶಬರಿಮಲೆ ದೇಗುಲಕ್ಕೆ ನಿರ್ಬಂಧಿತ ವಯಸ್ಸಿನ ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಗುರುವಾರದಂದು ಕೇರಳದಲ್ಲಿ ಶಬರಿಮಲೆ ಸಂರಕ್ಷಣಾ ಸಮಿತಿ ಹಾಗೂ ಬಿಜೆಪಿ ಪಕ್ಷ ಹರತಾಳ ನಡೆಸಲಾಗಿದ್ದು, ಈ ಸಂದರ್ಭ ಹಲವು ಅಂಗಡಿ ಮುಂಗಟ್ಟುಗಳಿಗೆ ಹಾನಿಗೊಳಿಸಲಾಗಿದೆ. ಈ ಹಿನ್ನೆಲೆ ಶುಕ್ರವಾರದಂದು ಉಪ್ಪಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ಅರ್ಧ ದಿನ ಬಂದ್ ಮಾಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
ವ್ಯಾಪಾರ ಸಂಸ್ಥೆಗಳ ಮೇಲೆ ಹರತಾಳ ಬೆಂಬಲಿಗರಿಂದ ದಾಳಿಯನ್ನು ಖಂಡಿಸಿ ವ್ಯಾಪಾರಸ್ಥರು ಶುಕ್ರವಾರದಂದು ಪ್ರತಿಭಟನೆ ನಡೆಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಯಿಂದ ಮಧ್ಯಾಹ್ನ ತನಕ ಉಪ್ಪಳದಲ್ಲಿ ವ್ಯಾಪಾರ ಸಂಸ್ಥೆಗಳು ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಮಧ್ಯಾಹ್ನ ತನಕ ಎಲ್ಲಾ ವ್ಯಾಪಾರ ಮಳಿಗೆಗಳು ಬಂದ್ ನಡೆಸಲು ತೀರ್ಮಾನಿಸಲಾಗಿದೆ.
ಇಂದು ನಡೆದ ಹರತಾಳದ ಸಂದರ್ಭದಲ್ಲಿ ಉಪ್ಪಳ, ಬಂದ್ಯೋಡು ಪರಿಸರದ 30ಕ್ಕೂ ಅಧಿಕ ವ್ಯಾಪಾರ ಮಳಿಗೆಗಳಿಗೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.