ಮಂಗಳೂರು, ಜ 03(SM): ವಿಜಯ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. 5 ಬ್ಯಾಂಕ್ ಗಳನ್ನು ಜಿಲ್ಲೆ ದೇಶಕ್ಕೆ ನೀಡಿದೆ. ರೈತರನ್ನು ಕಟ್ಟಿಕೊಂಡು ಹುಟ್ಟು ಹಾಕಿದ ಬ್ಯಾಂಕ್ ವಿಜಯಾ ಬ್ಯಾಂಕ್. ಈ ಹಿನ್ನೆಲೆ ಸಂಸದ ನಳಿನ್ ಸಹಿತ ಜನರು ಬೀದಿಗಿಳಿದು ಹೋರಾಡಬೇಕಿದೆ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ದೇನಾ, ಬರೋಡಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇನಾ, ಬರೋಡಾ ಬ್ಯಾಂಕ್ ಕೋಟ್ಯಾಂತರ ರೂಪಾಯಿ ನಷ್ಟದಲ್ಲಿದೆ. ಆದರೆ ಈ ನಷ್ಟದಲ್ಲಿರುವ ಬ್ಯಾಂಕ್ ಜೊತೆ ವಿಲೀನ ಸರಿಯಲ್ಲ. ಆದರೆ ಇದು ರಾಜಕೀಯ ದಿವಾಳಿತನದ ಫಲವಾಗಿದೆ. ಸಂಸದರು ಇದನ್ನು ಪ್ರಶ್ನಿಸುವಲ್ಲಿ ವಿಫಲರಾಗಿದ್ದಾರೆ. ಮೋದಿಯವರ ಭಕ್ತಿಯಿಂದ ರಾಜಕಾರಣ ಮಾಡೋದು ಬೇಡ. ನಾನು ಓರ್ವ ಬ್ಯಾಂಕ್ ನೌಕರನ ಮಗ ಅನ್ನೋ ಹೆಮ್ಮೆಯಿದೆ. ಅದಕ್ಕಾಗಿ ನನ್ನ ರಕ್ತ ಕುದಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಂಸದರು ಮೋದಿಯ ಭಕ್ತರು, ಜನಪ್ರತಿನಿಧಿಗಳಲ್ಲ. ಓರ್ವ ನಾಯಕನಿಗೆ ಅನುಯಾಯಿಗಳಿರಬೇಕು. ಕೇಂದ್ರದಲ್ಲಿರುವುದು ಕಿವುಡ ಮತ್ತು ಮೂಗ ಸರಕಾರ. ನಮ್ಮ ಪ್ರತಿಭಟನೆಗಳು ಅವರಿಗೆ ಕಾಣಿಸುವುದಿಲ್ಲ. ಆದರೆ ಮೂರು ತಿಂಗಳಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಜನರಿಗೆ ಈ ವಿಚಾರ ತಿಳಿಯಬೇಕಿದೆ. ಗುಜರಾತ್ ನವರು ಮುಳುಗಿಸಿದ ಬ್ಯಾಂಕ್ ಜೊತೆ ಕರಾವಳಿಯ ವಿಜಯಾ ಬ್ಯಾಂಕ್ ವಿಲೀನ ಸರಿಯಲ್ಲ ಎಂದರು.