ಮಂಗಳೂರು, ಜ 04(SM): ದುಷ್ಕರ್ಮಿಗಳ ತಂಡವೊಂದು ಯುವಕನೊಬ್ಬನ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೈದ ದಾರುಣ ಘಟನೆ ಮಂಗಳೂರಿನ ಪಂಜಿಮೊಗರುವಿನ ಮಾಲಾಡಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಉರ್ದಾಂಡಿ ನಿವಾಸಿ ರಾಕೇಶ್ ಹತ್ಯೆಗೊಳಗಾದ ಯುವಕ. ರಾಕೇಶ್ ಕೆಲಸ ಮುಗಿಸಿ ಮನೆಗೆ ಸ್ಕೂಟರ್ ನಲ್ಲಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ತಲವಾರು ದಾಳಿ ನಡೆಸಿ ಹತೈಗೈದು ಪರಾರಿಯಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್, ಮಂಗಳೂರು ಡಿಸಿಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನೆಯ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.