ಮಂಗಳೂರು, ಜ 04(MSP): ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಸ್ಟಿನ್ ನೊರೊನ್ಹಾ (55) ಅವರು ವಾಮಂಜೂರಿನಲ್ಲಿರುವ ಮನೆಯಲ್ಲಿ ಬುಧವಾರ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರು ಕಳೆದ 25 ವರ್ಷಗಳಿಂದ ಕತಾರ್ನಲ್ಲಿ ಉದ್ಯೋಗದಲ್ಲಿದ್ದರು. ಇವರು ದುಡಿದು ಸಂಪಾದಿಸಿದ 20 ಲಕ್ಷ ರೂಪಾಯಿಗಳನ್ನು ಮೂವರು ಮಂದಿ ಭೂ ವ್ಯವಹಾರಕ್ಕಾಗಿ ಸಾಲ ಪಡೆದಿದ್ದರು. ಆದರೆ ಬಳಿಕ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರು ಆತ್ಮಹತ್ಯೆಗೆ ಮುನ್ನ ಫೇಸ್ಬುಕ್ನಲ್ಲಿ ತನಗೆ ವಂಚನೆ ಮಾಡಿದವರ ಹೆಸರನ್ನು ಉಲ್ಲೇಖಿಸಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.