ನವದೆಹಲಿ,ಜ 04(MSP): ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಚಲಾವಣೆಗೆ ಬಂದ 2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಎರಡು ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ತಗ್ಗಿಸಿ ಚಲಾವಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೀಗಾಗಿ ಎರಡು ಸಾವಿರ ಮುಖಬೆಲೆ ನೋಟುಗಳನ್ನು ಕ್ರಮೇಣ ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ ಬಿಐ ಅಧಿಕಾರಿ ಮಾರುಕಟ್ಟೆಯಲ್ಲಿ ಎಷ್ಟು ಪ್ರಮಾಣದ ನೋಟು ಚಲಾವಣೆಯಲ್ಲಿರಬೇಕು ಎಂಬುದರ ಬಗ್ಗೆ ಆರ್ ಬಿಐ ಹಾಗೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.
ಆರ್ ಬಿಐ ಮಾಹಿತಿ ಪ್ರಕಾರ 2 ಸಾವಿರ ರೂ. ಮುಖಬೆಲೆಯ 3,285 ದಶಲಕ್ಷ ನೋಟುಗಳು 2017ರ ಮಾರ್ಚ್ ವರೆಗೆ ಚಲಾವಣೆಯಲ್ಲಿತ್ತು. 2017 ರ ವೇಳೆಗೆ 50.2 ರಷ್ಟಿದ್ದ 2 ಸಾವಿರ ನೋಟುಗಳ ಪ್ರಮಾಣ2018 ರ ಮಾರ್ಚ್ ವೇಳೆ 37.3 ಕ್ಕೆ ಇಳಿಕೆಯಾದವು ಎಂದು ಹೇಳಲಾಗಿದೆ.