ಕಾರ್ಕಳ,ಜ 04(MSP): ನಿಜವಾದ ಪ್ರೀತಿ ಪಡೆಯುವುದಕ್ಕಿಂತ ಕೊಡುವುದರಲ್ಲಿ ಅಡಗಿದೆ. ದೇವರ ಪ್ರೀತಿ ಅಗಾದತೆಯಲ್ಲಿ ಬೆಳೆಯುವಂತಾಗಬೇಕು. ಪ್ರೀತಿಯೊಂದಿಗೆ ಶಾಂತಿ ಸಮಾಧಾನವನ್ನು ನಮ್ಮ ಮನೆಮನಗಳಲ್ಲಿ ನೆನೆಯಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಅವರು ಗುರುವಾರ ಅತ್ತೂರು ಸಂತ್ ಲಾರೆನ್ಸ್ ಬೆಸಿಲಿಕಾ ದಲ್ಲಿ ಜನಪತ್ರಿನಿಧಿ, ಅಧಿಕಾರಿಗಳು ,ಪತ್ರಕರ್ತ ಮಿತ್ರರೊಂದಿಗೆ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಅಚರಣೆಯ ಪ್ರಯುಕ್ತ ಹಮ್ಮಿಕೊಂಡ ಸೌಹಾರ್ದ ಕೂಟ ಸಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತ ಒಂದು ಸುಂದರವಾದ ಹೂ ತೋಟ ಇಲ್ಲಿನ 29 ರಾಜ್ಯಗಳಲ್ಲಿ ಮೂರು ಸಾವಿರ ಜಾತಿಗಳು 12 ಪ್ರಮುಖ ಧರ್ಮಗಳು ಜತೆಯಾಗಿ ಸೌಹಾರ್ದಯುತವಾಗಿ ಬಾಳುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಪ್ರೀತಿ ಶಾಂತಿ ಸಮಾಧಾನ ದಿಂದ ಬದುಕು ಸಾಗಿಸಬೇಕಾಗಿರುವುದು ನಮ್ಮ ಅದ್ಯ ಕರ್ತವ್ಯ. ನಮ್ಮ ದೇಶ, ನಮ್ಮ ಪ್ರಕೃತಿ ಪ್ರಾವಿತ್ರತೆ ಬಗ್ಗೆ ಸ್ವಾಮಿ ವಿವೇಕಾನಂದರು ಉತ್ತಮವಾಗಿ ಬಣ್ಣಿಸಿದ್ದು ಅವರ ಮಾತನ್ನು ನೆನಪಿದರು. ಇದೇ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಸರ್ವೋತ್ತಮ ಅಭಿವೃದ್ದಿ ಗಾಗಿ ಶ್ರಮಿಸಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಾನ್ ಡಿಸಿಲ್ವಾ ಮಾತನಾಡಿ ಜನವರಿಯಲ್ಲಿ ನಡೆಯಲಿರುವ ಬೆಸಿಲಿಕಾ ಮಹೋತ್ಸವದ ಕುರಿತಂತೆ ಮಾಹಿತಿ ನೀಡಿದರು. ಸಂತೋಷ್ ಡಿಸಿಲ್ವಾ ಪ್ರಾಸ್ತಾವಿಕ ಮಾತನಾಡಿ ಊರಿನ ಜನರ ಭಕ್ತಿ ಹಬ್ಬ ಇದಾಗಿದೆ ಎಂದರು
ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾ ಧರ್ಮಗುರುಗಳಾದ ವಂ ದಾ ಜೋರ್ಜ್ ಡಿಸೋಜಾ ಸ್ವಾಗತಿಸದರು. ಶಾಸಕ ವಿ ಸುನಿಲ್ , ಮಾಜಿ ಶಾಸಕ ಗೋಪಾಲ್ ಭಂಡಾರಿ,ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಶೆಟ್ಟಿ, ನಗರ ಠಾಣಾ ಪಿಎಸ್ ಐ ನಂಜನಾಯ್ಕ್, ಗ್ರಾಮಾಂತರ ಠಾಣಾ ಪಿ ಎ ನಾಸೀರ್ ಹುಸೇನ್, ಇತರ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.