ಉಡುಪಿ, ಜ 04(SM): ರಾಮನಿಗೆ ಸೀತಾದೇವಿಯು ಪವಿತ್ರಳು. ನಿರ್ದೋಷಿ ಎಂದು ಗೊತ್ತಿದ್ದರೂ ಪ್ರಜೆಗಳ ಮಾತಿಗೆ ಕಟ್ಟುಬಿದ್ದು ಕಾಡಿಗೆ ಕಳುಹಿಸಿದ. ಅಂತೆಯೇ ಸರಕಾರ ಸಂಪ್ರದಾಯಕ್ಕೆ ಮನ್ನಣೆ ಕೊಡಬೇಕು. ನ್ಯಾಯಾಲಯ ಆಗಲಿ ಸರಕಾರ ಆಗಲಿ ಇದರ ಬಗ್ಗೆ ಜನಾಭಿಪ್ರಾಯ ಕೇಳಿಲ್ಲ. ಈ ವಿಚಾರದ ಬಗ್ಗೆ ಮತಗಣನೆ ಮಾಡಲಿ, ಮಾಡಿದರೆ ಮುಂದೆ ಕೇರಳ ಸರಕಾರಕ್ಕೆ ಸೋಲು ನಿಶ್ಚಿತ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ನಾನು ಶಾಸ್ತ್ರ ಸಂಪ್ರದಾಯದ ವಿರೋಧಿಯಲ್ಲ. ಈ ಬಗ್ಗೆ ಹಿಂದೂ ಜನಾಭಿಪ್ರಾಯ ಕೇಳಲಿ. ಹಿಂದೂ ಧಾರ್ಮಿಕತೆಯನ್ನು ಬದಲಾಯಿಸಲು ಜಾತ್ಯತೀತ ಸರಕಾರಕ್ಕೇನು ಅಧಿಕಾರ ಇದೆ? ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದರು.
ಇದರ ಬಗ್ಗೆ ಒಂದು ಧಾರ್ಮಿಕ ಮುಖಂಡರ ಸಭೆಯಾಗಲಿ. ಇಷ್ಟೊಂದು ಹಠ ಸರಕಾರಕ್ಕೆ ಸರಿಯಲ್ಲ. ಶಬರಿಮಲೆಯ ವಿಷಯವನ್ನು ಹಿಡಿದು ಚುನಾವಣೆಯನ್ನೆದುರಿಸುವುದು ಸರಿಯಲ್ಲ. ಧಾರ್ಮಿಕ ಮುಖಂಡರ ಜತೆ ಚರ್ಚೆಯಾಗಿ ಅಭಿಪ್ರಾಯ ಸಂಗ್ರಹವಾಗಲಿ. ಸಂಪ್ರದಾಯ ಯಾವುದೇ ಆಗಿರಲಿ ಅನ್ಯಾಯವಾದಗ ವಿರೋಧಿಸುತ್ತೇನೆ ಎಂದು, ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.