ಮಂಗಳೂರು, ಜ05(SS): ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ಮಹಿಳೆಯರು ನನ್ನನ್ನು ನೋಡಲು ಬರಬೇಡಿ ಎಂದು ಹೇಳಿಲ್ಲ, ಆದರೆ ಸಂಪ್ರದಾಯವನ್ನು ಮುರಿಯುವ ಹಠದಲ್ಲಿ ದೇವಾಲಯ ಪ್ರವೇಶಿಸುವುದು ಸರಿಯಲ್ಲ ಎಂದು ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯಿಸಿದ ಅವರು, ದೇವರ ನಾಡು ಕೇರಳದಲ್ಲಿ ಹೊಡೆದಾಟ, ಬಡಿದಾಟಗಳಾಗುತ್ತಿದೆ. ದೇವರನ್ನು ನೋಡಲು ಭಕ್ತಿಯಿಂದ ಹೋಗಬೇಕು. ರಕ್ತ ಸುರಿಸಿಕೊಂಡು ಹೋದರೆ ಯಾವುದೇ ಪ್ರಯೋಜನವಿಲ್ಲ. ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ಮಹಿಳೆಯರು ನನ್ನನ್ನು ನೋಡಲು ಬರಬೇಡಿ ಎಂದು ಹೇಳಿಲ್ಲ. ಆದರೆ ಮಹಿಳೆಯರು ಹಠದಿಂದ ಹೋಗುವುದು ಸರಿಯಲ್ಲ. ನಿಯಮಗಳನ್ನು ಪಾಲಿಸಿ, ಧರ್ಮಕ್ಕೆ ಗೌರವ ನೀಡಬೇಕು. ಸಂಪ್ರದಾಯವನ್ನು ಪಾಲಿಸಬೇಕು. ಹಿಂದೂ ಧರ್ಮದ ಭಾವನೆಗಳಿಗೆ ಬೇರೆ ಧರ್ಮದವರು ಮಧ್ಯ ಪ್ರವೇಶಿಸಿ ನೋವು ಮಾಡಬೇಡಿ ಎಂದು ವಿನಂತಿಸಿದ್ದಾರೆ.
ಕೇರಳದ ಶಬರಿಮಲೆ ದೇವಸ್ಥಾನದ ಒಳಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆಧುನಿಕತೆಗೆ ಅಗತ್ಯವಾದ ತೀರ್ಪು ಹೊರಬಂದಿದೆ. ಈ ತೀರ್ಪು ಸ್ವಾಗತಾರ್ಹ ಪುರುಷರಂತೆ ಮಹಿಳೆಯರಿಗೂ ಪೂಜೆಯ ಸಮಾನ ಅವಕಾಶವಿದೆ. ಸಂಪ್ರದಾಯದ ಕಾರಣಕ್ಕೆ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವುದು ಸರಿಯಲ್ಲ ಎಂದು ಹೇಳಿದರು.
ಮಹಿಳೆಯರಿಗೆ ಎಲ್ಲಾ ದೇವಾಲಯಕ್ಕೂ ಮುಕ್ತ ಪ್ರವೇಶ ಇರಬೇಕು. ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಲಿಂಗ ಅಸಮಾನತೆಯಾಗುತ್ತದೆ. ಅಲ್ಲದೆ ಇದು ಹಿಂದೂ ಮಹಿಳೆಯರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.
ಮಹಿಳೆಯರು ಮುಟ್ಟಾಗುತ್ತಾರೆ ಎಂಬ ಒಂದು ಕಾರಣಕ್ಕೇ ಪ್ರವೇಶ ನಿರಾಕರಿಸುವುದು ಎಷ್ಟು ಸರಿ...? ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಸ್ವತಃ ತಾವೇ ದೇವಾಲಯಕ್ಕೆ ಬರುವುದಿಲ್ಲ. ದೇವರನ್ನು ನೋಡಲು ಎಲ್ಲರಿಗೂ ಸಮಾನ ಹಕ್ಕಿದೆ. ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದು ಹೇಳಿದರು.
ಕೇರಳದ ಪವಿತ್ರ ಯಾತ್ರಾಸ್ಥಳ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಮ್ಮತಿ ಸೂಚಿಸಿ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದು ಕೋರ್ಟ್ ಕೊಟ್ಟಿರುವ ತೀರ್ಪು ಅಲ್ಲ. ಅಯ್ಯಪ್ಪ ಸ್ವಾಮಿಯೇ ಕೊಟ್ಟಿರುವ ತೀರ್ಪು. ನಾವು ಕಾನೂನು ಗೌರವಿಸೋಣ. ಎಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತದೆ. ಮುಂದೆ ನಡೆಯಲಿರುವುದು ದೇವರ ಇಚ್ಛೆಯಂತೆ ನಡೆಯುತ್ತದೆ ಎಂದು ಹೇಳಿದ್ದಾರೆ.