ತಿರುವನಂತಪುರಂ, ಜ05(SS): ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಸಂಘರ್ಷ ಇದೀಗ ಬಾಂಬ್ ದಾಳಿಯ ಹಂತಕ್ಕೆ ತಲುಪಿದೆ.
ಕೇರಳದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಸಿಪಿಎಂ ಶಾಸಕ ಎನ್. ಶಂಸೀರ್ ಹಾಗೂ ಮಾಜಿ ಜಿಲ್ಲಾ ಕಾರ್ಯದರ್ಶಿ ಪಿ.ಶಶಿ ನಿವಾಸದ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ ದಾಳಿ ನಡೆಸಿದ್ದಾರೆ.
ಮೂರು ದಿನಗಳ ಹಿಂದೆ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುತ್ತಲೇ ಉದ್ವಿಗ್ನಗೊಂಡ ಕೇರಳದಲ್ಲಿ ಈಗ ಸಿಪಿಐಎಂ ಮತ್ತು ಬಿಜೆಪಿ ನಾಯಕರ ಮನೆಗಳ ಮೇಲೆ ಬಾಂಬ್ ದಾಳಿಗಳು ನಡೆಯುತ್ತಿವೆ. ಶುಕ್ರವಾರ ರಾತ್ರಿ ಮೊದಲಿಗೆ ತಲಶ್ಶೇರಿಯ ಸಿಪಿಐಎಂನ ಶಾಸಕ ಶಮ್ಶೀರ್ ಅವರ ಮನೆಯ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಲಾಯಿತು. ಇದಾದ ನಂತರ ಬಿಜೆಪಿಯ ರಾಜ್ಯಸಭಾ ಸದಸ್ಯ ಮುರಳೀಲೀಧರನ್ ಅವರ ಮನೆಯ ಮೇಲೂ ಬಾಂಬ್ ದಾಳಿ ನಡೆದಿದೆ.
ಕೇರಳಲದಲ್ಲಿ ಅಶಾಂತಿ ಮನೆ ಮಾಡಿರುವ ಹಿನ್ನೆಲೆಯಲ್ಲಿ ತಲಶ್ಶೆರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಿಪಿಐಎಂನ ನಾಯಕ ಶಮ್ಶೀರ್ ಅವರೂ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10.15ರ ಸುಮಾರಿಗೆ ಬೈಕ್ನಲ್ಲಿ ಬಂದ ದುರ್ಷರ್ಮಿಗಳು ತಲಶ್ಶೇರಿಯಲ್ಲಿ ಮದಪೀದಿಕಾಯಿಲ್ ಎಂಬಲ್ಲಿರುವ ಶಮ್ಶೀರ್ ಅವರ ಮನೆಯ ಮೇಲೆ ಬಾಂಬ್ ಎಸೆದು ಹೋಗಿದ್ದಾರೆ.
ಸಿಪಿಎಂ ನಾಯಕನ ಮನೆ ಮೇಲೆ ಬಾಂಬ್ ದಾಳಿ ನಡೆದ ನಂತರದ ಕೆಲವೇ ಹೊತ್ತಿನಲ್ಲಿ ಬಿಜೆಪಿ ರಾಜ್ಯಸಭೆ ಸದಸ್ಯ ವಿ. ಮುರಳೀಧರನ್ ಅವರ ಮನೆ ಮೇಲೂ ಕಚ್ಚಾ ಬಾಂಬ್ ದಾಳಿ ನಡೆದಿದೆ.