ಬೆಂಗಳೂರು, ಜ05(SS): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಪ್ರಕಾಶ್ ರಾಜ್ ಅವರಿಗೆ ಆಮ್ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ.
ಬೆಂಗಳೂರು ಆಮ್ಆದ್ಮಿ ಪಕ್ಷದ ನಾಯಕರು ಜೈನ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಲು ಸೂಚಿಸಿದ್ದಾರೆ.
ಪ್ರಕಾಶ್ ರಾಜ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಉತ್ತರಿಸಲು ಕಾಲ ಮುಗಿಯಿತು. ಇದೀಗ ಲೋಕಸಭೆಯಲ್ಲಿ ಪ್ರಶ್ನಿಸುವ ಕಾಲ ಸನ್ನಿಹಿತವಾಗುತ್ತಿದೆ. ನಾನು ಈಗಾಗಲೇ ಘೋಷಿಸಿರುವಂತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆಮ್ಆದ್ಮಿ ಪಕ್ಷದ ಬೆಂಬಲ ದೊರೆತಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.
ಬೇರೆ ಪಕ್ಷಗಳು 70 ವರ್ಷಗಳಿಂದ ಮಾಡದೆ ಇರುವ ಕೆಲಸವನ್ನು ಆಮ್ಆದ್ಮಿ ಪಕ್ಷ ದೆಹಲಿಯಲ್ಲಿ ಮಾಡಿ ತೋರಿಸಿದೆ. ನಾಗರಿಕರು ಮನಸ್ಸು ಮಾಡಿದರೆ ಪ್ರಪಂಚವನ್ನೇ ಬದಲಾಯಿಸಬಹುದು ಎನ್ನುವುದಕ್ಕೆ ಆಮ್ ಆದ್ಮಿ ಪಕ್ಷ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.