ಮಂಗಳೂರು, ಜ 06(SM): ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಬಳಿ ರಾಕೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 03ರಂದು ತಡರಾತ್ರಿ ಮಂಗಳೂರು ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗೆರು ಬಳಿಯ ಮಾಲಾಡಿ ಎಂಬಲ್ಲಿ ಕ್ಷುಲಕ ಕಾರಣದ ನೆಪವೊಡ್ಡಿ ಪಂಜಿಮೊಗರು ಉರುಂಡಾಡಿಬೈಲು ನಿವಾಸಿ ಯೋಗೀಶ್ ಎಂಬವರ ಮಗ ರಾಕೇಶ್ ಎಂಬಾತನನ್ನು 3 ಮಂದಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು.
ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಪಂಜಿಮೊಗರು ನಿವಾಸಿ ಸುನಿಲ್ ಕಮಾರ್, ಕೋಡಿಕಲ್ ನಿವಾಸಿ ಪ್ರವೀಣ್ ಪೂಜಾರಿ ಹಾಗೂ ಉರ್ವಾಸ್ಟೋರ್ ನಿವಾಸಿ ಪ್ರೀತಂ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೃತ ರಾಕೇಶ್ ನ ಸ್ನೇಹಿತರಾಗಿದ್ದಾರೆ.