ಉಡುಪಿ, ಜ 07(MSP): ಈ ಸಾಲಿನ ಕ್ಯಾಟ್ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಮಣಿಪಾಲದ ನಿರಂಜನ್ ಪ್ರಸಾದ್ ಶೇ 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರು ದೇಶದಲ್ಲೇ ಅತ್ಯುನ್ನತ ಅಂಕಗಳನ್ನು ಪಡೆದ 11 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಈ ಸಾಧನೆ ಮಾಡಿದ ದಕ್ಷಿಣ ಭಾರತದ ಏಕೈಕ ವಿದ್ಯಾರ್ಥಿ ಇವರು.
ದೇಶದ ಪ್ರತಿಷ್ಠಿತ ಐಐಎಂ ಹಾಗೂ ಬ್ಯುಸಿನೆಸ್ ಸ್ಕೂಲ್ಗಳಲ್ಲಿ ಪ್ರವೇಶ ಪಡೆಯಲು ಕಳೆದ ನವೆಂಬರ್ನಲ್ಲಿ ಕ್ಯಾಟ್ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ 11 ಮಂದಿ ಮಾತ್ರ ಶೇ 100 ಫಲಿತಾಂಶ ಪಡೆದಿದ್ದಾರೆ. ನಿರಂಜನ್, ಕರ್ನಾಟಕದಿಂದ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿಯಾಗಿದ್ದಾನೆ.
ಮೂಡುಬಿದಿರೆ ಮೈಟ್ ಇನ್ ಸ್ಟಿಟ್ಯೂಟ್ ನ ಎಂಬಿಎ ವಿಭಾಗದ ಮುಖ್ಯಸ್ಥ ಜಯದೇವ್ ಪ್ರಸಾದ್ ಮೊಳೆಯಾರ ಮತ್ತು ಮಾಹೆಯ ಪ್ರಾಧ್ಯಾಪಕಿ ಕೀರ್ತನಾ ಪ್ರಸಾದ್ ಅವರ ಪುತ್ರನಾಗಿರುವ ನಿರಂಜನ್ ಪ್ರಸಾದ್ , ಬ್ರಹ್ಮಾವರದ ಲಿಟ್ಲ ರಾಕ್ ನಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ಮದ್ರಾಸ್ ಐಐಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ