ರಾಯಚೂರು, ಜ 07(SM): ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್ ಹಾಗೂ ಮೀನುಗಾರರನ್ನು ಹುಡುಕುವಂತಹ ಕಾರ್ಯ ಮುಂದುವರೆದಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರು ಕಾಣೆಯಾಗಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಸರ್ಕಾರ ತಕ್ಷಣವೇ ಹುಡುಕುವುದಕ್ಕೆ ಪ್ರಾರಂಭಿಸಿದೆ. ನಿರಂತರ ಶೋಧ ಕಾರ್ಯ ಮುಂದುವರೆಸಲಾಗಿದೆ. ನಾನು ಕೂಡ ಮೂನುಗಾರರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಲಿದ್ದೇನೆ. ಮೀನುಗಾರರ ಪತ್ತೆಗೆ ಸರ್ಕಾರ ತನ್ನ ಕಾರ್ಯವನ್ನು ನಿರಂತರ ಮುಂದುವರೆಸಲಿದೆ ಎಂದರು.
ಇದುವರೆಗೆ ಕಾಣೆಯಾದವರು ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ದೊರೆತಿಲ್ಲ. ಅವರನ್ನ ಹೆಲಿಕಾಪ್ಟರ್ ಮೂಲಕ ಹುಡುಕುವ ಕೆಲಸ ನಡೆದಿದ್ದು, ಕೋಸ್ಟಲ್ ರಕ್ಷಣೆ ಪಡೆಯಿಂದ ಕಾರ್ಯಾಚರಣೆ ನಡೆದಿದೆ. ಶೋಧ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಸಹಾಯ ಕೇಳಲಾಗುವುದು ಎಂದರು.