ಮಂಗಳೂರು, ಅ 23 : ಯುಎಇ ಎಕ್ಸ್ ಚೇಂಜ್ ನ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಗೆ 2017ರ ಪಿಂಗಾರ ರಾಜ್ಯೋತ್ಸವ ಆಯ್ಕೆಯಾಗಿದ್ದಾರೆ. 13ನೇ ವರ್ಷದ ಪ್ರಶಸ್ತಿ ಪುರಸ್ಕಾರ ಸಮಾರಂಭ ಇದಾಗಿದ್ದು ನವೆಂಬರ್ 7 ರಂದು ಪುರಭವನದಲ್ಲಿ ನಡೆಯುವ ಆದ್ದೂರಿ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ಡಾ ಅಲೊಶಿಯಸ್ ಪಾವ್ಲ ಡಿಸೋಜ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಶಸ್ತ್ರಿ ಆಯ್ಕೆಯ ಸಂಚಾಲಕ ರೋಯ್ ಕಾಸ್ತೆಲಿನೊ ತಿಳಿಸಿದ್ದಾರೆ .
ನಗರದಲ್ಲಿ ಅವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಧೀರ್ ಕುಮಾರ್ ಶೆಟ್ಟಿ ಕಾಸರಗೋಡಿನ ಪೆರ್ಲದವರು. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದು ಸಿಎ ಅಭ್ಯಾಸಿಸಿ ಆ ಬಳಿಕ ಯುಎಇ ಎಕ್ಸ್ ಚೇಂಜ್ ನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ, ಎಕ್ಸ್ ಪ್ರೆಸ್ ಮನಿ ಎನ್ನುವ ಸಂಸ್ಥೆಯ ಮೂಲಕ ನಾಲ್ಕು ಲಕ್ಷ ಉದ್ಯೋಗ ಸೃಷ್ಟಿ ಗೆ ಕಾರಣಕರ್ತರಾಗಿದ್ದಾರೆ. ಇದರಲ್ಲೂ ಬಡವರಿಗೆ ಉದ್ಯೋಗ ಅವಕಾಶ ನೀಡುವಲ್ಲಿ ಸುಧೀರ್ ಅವರ ಕಾಳಜಿ ಅಧಿಕವಾಗಿದೆ ಎಂದರು.
ಸುಧೀರ್ ಕುಮಾರ್ ಶೆಟ್ಟಿ
ನವೆಂಬರ್ 7 ರಂದು ಪುರಭವನದಲ್ಲಿ ನಡೆಯುವ ಆದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿನ ವಿಧಾನಸಭಾ ಕ್ಷೇತ್ರದ ಶಾಸಕ ಜೆ ಆರ್ ಲೋಬೊ, ಐವನ್ ಡಿಸೋಜ, ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ.