ಮಂಗಳೂರು/ಉಡುಪಿ ಜ 08 (MSP): ಹತ್ತು ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರದ ಹಲವು ನೀತಿ ಖಂಡಿಸಿ, ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿರುವ ಭಾರತ್ ಬಂದ್ಗೆ ಕರೆ ದ.ಕ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆತಂಕದ ನಡುವೆಯೂ ಮಂಗಳೂರಿನಲ್ಲಿ ಖಾಸಗಿ ಬಸ್ ಗಳು ರಸ್ತೆಗಿಳಿದಿದ್ದು, ಲಾಲಾಭಾಗ್, ಪಂಪ್ ವೆಲ್ ಸೇರಿದಂತೆ ನಗರದ ಹಲವೆಡೆ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿದೆ.
ಉಡುಪಿ
ಇನ್ನು ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ .ಸಿಟಿ ಹಾಗೂ ಸರ್ವಿಸ್ ಬಸ್ ಸಂಚಾರ ಸಂಪೂರ್ಣ ಸ್ತಬ್ದ ವಾಗಿದ್ದು ಆಟೋ ರಿಕ್ಷಾ ಟ್ಯಾಕ್ಸಿ ಸಂಚರಿಸುತ್ತಿದೆ. ಕಾರ್ಮಿಕರು ಎಂದಿನಂತೆ ಕೆಲಸಕ್ಕೆಂದು ನಗರಕ್ಕೆ ಆಗಮಿದ್ದಾರೆ. ರಿಕ್ಷಾ ಚಾಲಕರಲ್ಲಿ ಮನವಿ ಮಾಡಿಕೊಂಡ ಕಾರ್ಮಿಕ ಸಂಘಟನೆ ಮಾತಿಗೆ ಸೊಪ್ಪು ಹಾಕಿಲ್ಲ. ನಾವು ದುಡಿಯುತ್ತವೆ ನಮಗೆ ಸರಕಾರದ ಯಾವುದೇ ಸವಲತ್ತು ದೊರೆಯಲ್ಲ ದುಡಿದರೆ ಮಾತ್ರ ಊಟ ಮಾಡಬಹುದು ಇಲ್ಲವಾದರೆ ಉಪಾಸ ಇರಬೇಕಾಗುತ್ತದೆ ಎಂದ ಆಟೋ ಚಾಲಕರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಟಿ ಬಸ್ ನಿಲ್ದಾಣದಲ್ಲಿ ಚಾಲಕರು ಕೆಲಸ ಮಾಡಬೇಕೆಂದು ಬಸ್ ಮಾಲಕ ಮತ್ತು ಚಾಲಕರ ನಡುವೆ ವಾಗ್ವಾದ ನಡೆದಿದ್ದು ನಂತರ ಪೊಲೀಸರು ಬಂದು ನಿಲ್ದಾಣದಿಂದ ಚದುರಿಸಿದರು. ಕೆ ಎಸ್ಆರ್ ಟಿ ಬಸ್ ಗೆ ಪೊಲೀಸರು ಬೆಂಗಾವಲು ನೀಡಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ