ರಾಯಚೂರು,ಜ 08 (MSP): ‘ಮೀನುಗಾರರು ನಾಪತ್ತೆಯಾದ ತಕ್ಷಣ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿ ನಿರಂತರ ಶೋಧ ಕಾರ್ಯ ಮಾಡಲಾಗುತ್ತಿದೆ. ಇನ್ನು ನಾವೇನು ಮೀನುಗಾರರನ್ನು ಹುಡುಕಲು ಸಮುದ್ರಕ್ಕೀಳಿಯಬೇಕೆ’ ಎಂದು 12 ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಪ್ರತಿಕ್ರಿಯೆ ನೀಡಿದರು.
ಸಿಂಧನೂರಿನಲ್ಲಿ ಸೋಮವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’ಹೆಲಿಕಾಪ್ಟರ್ ಮೂಲಕ ಹುಡುಕುವ ಪ್ರಯತ್ನ ಮಾಡಲಾಗಿದೆ. ಮೀನುಗಾರರ ಸುಳಿವು ಇನ್ನೂ ಸಿಕ್ಕಿಲ್ಲ. ಬುಧವಾರ ಮಂಗಳೂರಿಗೆ ಹೋಗಿ ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡುತ್ತೇನೆ. ಕರಾವಳಿ ರಕ್ಷಣಾ ಪಡೆ ಮೂಲಕ ಹುಡುಕಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.