ಸುಳ್ಯ, ಜ 08 (MSP): ಹತ್ತು ಕಾರ್ಮಿಕ ಸಂಘಟನೆಗಳು ಕೇಂದ್ರ ಸರಕಾರದ ಹಲವು ನೀತಿ ವಿರೋಧಿಸಿ ಇಂದು ನಾಳೆ ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಇಂದು ಸುಳ್ಯದಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿಯವರ ಆದೇಶದ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ ಮಾಡಲಾಗಿದೆ,ಉಳಿದಂತೆ ಎಲ್ಲಾ ವ್ಯವಹಾರಗಳು ಮಾಮೂಲಿನಂತೆ ನಡೆಯುತ್ತಿದೆ.ಸುಳ್ಯ,ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಂಚಾರಿಸುತ್ತಿವೆ. ಮೈಸೂರು,ಮಡಿಕೇರಿ ಡಿಪೋದ ಬಸ್ಸುಗಳು,ಖಾಸಗಿ ಬಸ್ಸುಗಳು,ವಾಹನಗಳು ಸಂಚಾರಿಸುತ್ತಿವೆ.ಅಂಗಡಿಮುಂಗಟ್ಟುಗಳು ತೆರೆದಿವೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ.