ನವದೆಹಲಿ,ಜ 08 (MSP): ಕೇಂದ್ರ ಸರಕಾರದ ನೀಡಿದ್ದ ಅಕ್ಟೋಬರ್ 23ರ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕರಾಗಿ ಮತ್ತೆ ಮುಂದುವರಿಯಲು ಆಲೋಕ್ ಕುಮಾರ್ ವರ್ಮಾ ಅವರಿಗೆ ಮಂಗಳವಾರ ಸೂಚನೆ ನೀಡಿದೆ.
ಕೇಂದ್ರ ಸರಕಾರ ಅ.23ರ ತನ್ನ ಆದೇಶದ ಮೂಲಕ ಆಲೋಕ್ ಕುಮಾರ್ ವರ್ಮಾ ಅವರ ಅಧಿಕಾರವನ್ನು ಕತ್ತರಿ ಹಾಕಿ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ಇದನ್ನು ಪ್ರಶ್ನಿಸಿ ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಕೇಂದ್ರ ಸರ್ಕಾರದ ಆದೇಶ ತಪ್ಪು ಎಂದು ಹೇಳಿ ಸಿಬಿಐ ನಿರ್ದೇಶಕರ ಹುದ್ದೆಯಲ್ಲಿ ಅಲೋಕ್ ಅವರನ್ನು ಪುನಃಸ್ಥಾಪಿಸಿದೆ.
ಇದಲ್ಲದೆ ಕೇಂದ್ರಕ್ಕೆ ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳದಂತೆ ನಿರ್ಬಂಧಿಸಿದೆ. ಕೇಂದ್ರ ಈ ನಿರ್ಧಾರ ಪ್ರಕಟಿಸುವ ಮುನ್ನಾ ಸಿಜೆಐ, ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಕೇಂದ್ರ ಚರ್ಚೆ ನಡೆಸಬೇಕಿತ್ತು ಎಂದು ನ್ಯಾಯಾಲಯ ತಿಳಿಸಿದೆ
ಅಲದೆ ವರ್ಮಾ ವಿರುದ್ಧ ಸಿವಿಸಿಯೂ ಮಾಡುತ್ತಿರುವ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆ ಮುಕ್ತಾಯಗೊಳ್ಳುವ ತನಕ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.