ಕುಂದಾಪುರ, ಜ 08 (MSP): ಹತ್ತು ಕಾರ್ಮಿಕ ಸಂಘಟನೆಗಳು ಕೇಂದ್ರ ಸರಕಾರದ ಹಲವು ನೀತಿ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ಬೈಂದೂರು ತಾಲೂಕು ಗುಜ್ಜಾಡಿಯಲ್ಲಿ ಅಂಗಡಿಯನ್ನು ಮುಚ್ಚುವಂತೆ ಹೇಳಲು ಬಂದ ಗುಂಪೊಂದರ ಬಾಯಿ ಮುಚ್ಚಿಸಿದ ಅಂಗಡಿ ಮಾಲೀಕರೊಬ್ಬರ ವಿಡೀಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಂದ್ ಮಾಡಲು ಬಂದವರ ಮತ್ತು ಮಾಲಕರ ನಡುವಿನ ಮಾತಿನ ವಿಡಿಯೋ ವೈರಲ್ ಆಗಿದ್ದು ಅಂಗಡಿ ಬಂದ್ ಮಾಡಿ ಬೆಂಬಲಿಸಿ ಎಂದ ಗುಂಪಿನ ವಿರುದ್ದ ಸಿಡಿಮಿಡಿಗೊಂಡ ಅಂಗಡಿ ಮಾಲೀಕ ಮಾತಿಗೆ ಕೊನೆಗೆ ಪ್ರತಿಭಟನಕಾರರೇ ಕಾಲ್ಕಿತ್ತಿದ್ದಾರೆ. ನೀವು ಒಳ್ಳೆಯ ವಿಚಾರ ಹಿಡಿದು ಬನ್ನಿ ಅದಕ್ಕೆ ನಾನು ಸಪೋರ್ಟ್ ಮಾಡ್ತೇನೆ. ಮೋದಿ ಪ್ರಧಾನಿಯಾಗಿ ದೇಶಕ್ಕೆ ಹಿತವನ್ನು ಬಯಸುತ್ತಿದ್ದಾರೆ, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ನಿಮ್ಮ ಬಂದ್ ಗೆ ನನ್ನ ಸಪೋರ್ಟ್ ಇಲ್ಲ
ನೀವು ಬಂದ್ ಮಾಡುವುದಿದ್ದರೆ ಶಬರಿಮಲೆ ವಿಚಾರವಾಗಿ ಹೋರಾಟ ಮಾಡಿ, ಅಲ್ಲಿದ್ದ ಸಾವಿರಾರು ವರ್ಷ ನೀತಿ ನಿಯಮ ಹಾಳಾಗಿ ಹೋಗಿದೆ. ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲ, ಸಾವಿರಾರು ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡಿತಾ ಇತ್ತು .ಅಲ್ಲಿನ ಮುಖ್ಯಮಂತ್ರಿಗಳೇ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ ಎಂದಾಗ ಕಮ್ಯುನಿಸ್ಟ್ ನವರು ಬಂದ್ ಮಾಡಿಲ್ಲಾ. ಒಳ್ಳೆಯ ಪ್ರಧಾನಮಂತ್ರಿ ಬಂದಾಗ ನಿಮ್ಮದು ಬಂದ್ ಸ್ಟೈಕ್ ಎಲ್ಲಾ ಇರುತ್ತೆಎಂದು ಅವೇಶ ಭರಿತವಾಗಿ ಮಾತನಾಡಿದ್ದಾರೆ.
ಪ್ರತಿಭಟನಕಾರರು ಮಾನವೀಯತೆಯಿಂದ ಬಂದ್ ಮಾಡಿ ಮೆತ್ತಗಿನ ದ್ವನಿಯಲ್ಲಿ ಹೇಳಿದಾಗ ಇನ್ನಷ್ಟು ಆಕ್ರೋಶಗೊಂಡ ವ್ಯಾಪಾರಿ, ಯಾವುದು ಮಾನವೀಯತೆ ? ಮೊದಲು ದೇಶದ ಬಗ್ಗೆ ಚಿಂತೆ ಮಾಡಿ , ಅದು ಮಾನವೀಯತೆ. ಭಾರತ ದೇಶ ನಿಮಗೆ ಇಷ್ಟು ಸೌಲಭ್ಯ ನೀಡಿದೆ, ನರೇಂದ್ರ ಮೋದಿ ಸರಕಾರ ಸೌಲಭ್ಯ ನೀಡಿದೆ. ಇನ್ನು ನೀವು ಬೆಲೆ ಏರಿಕೆ ಮಾತನಾಡುತ್ತಿದ್ದೀರಾ ? ಸ್ವಲ್ಪ 2014 ರ ಲಿಸ್ಟ್ ನೋಡಿ, 2019ರ ಲೀಸ್ಟ್ ನೋಡಿ.ತಾಕತ್ತಿದ್ದರೆ ಎರಡು ಲೀಸ್ಟ್ ಟ್ಯಾಲಿ ಮಾಡಿ ನೋಡಿ. ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೆ ಪುಣ್ಯ, ನೀವು ಕೇರಳಕ್ಕೆ ಹೋಗಿ ಸ್ಟೈಕ್ ಮಾಡಿಎಂದು ಕಿಡಿಕಾರಿದಾಗ ಪ್ರತಿಭಟನಾಕಾರರು ಮೆಲ್ಲನೆ ಕಾಲ್ಕಿತ್ತರು.