ಬದಿಯಡ್ಕ, ಜ 08(SM): ಸಿಪಿಎಂ ಬದಿಯಡ್ಕ ಪ್ರಾದೇಶಿಕ ಕಚೇರಿಯನ್ನು ದುಷ್ಕರ್ಮಿಗಳು ಧ್ವಂಸಗೈದ ಘಟನೆ ನಡೆದಿದೆ. ಕಚೇರಿಯ ಪೀಠೋಪಕರಣ, ಟಿವಿ ಮೊದಲಾದ ವಸ್ತುಗಳನ್ನು ಕಿಡಿಗೇಡಿಗಳು ಪುಡಿಗೈದಿದ್ದಾರೆ.
ಸೋಮವಾರ ತಡರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪುತ್ತೂರು-ಬದಿಯಡ್ಕ ರಸ್ತೆ ಬದಿಯ ಖಾಸಗಿ ಕಟ್ಟಡದಲ್ಲಿ ಕಚೇರಿ ಕಾರ್ಯಾಚರಿಸುತ್ತಿತ್ತು. ಸೋಮವಾರ ರಾತ್ರಿ ಒಂದು ಗಂಟೆಯ ಬಳಿಕ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಮುಂದುವರೆದಿದೆ.