ಇಸ್ರೇಲ್: ಸಾಮಾಜಿಕ ಜಾಲದಿಂದ ಆದಾ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಪೊಲೀಸ್ ವಶಕ್ಕೊಳಗಾದ ಇಂಟ್ರೆಸ್ಟಿಂಗ್ ಕಹಾನಿ ಇಸ್ರೇಲ್ ನಲ್ಲಿ ನಡೆದಿದೆ.ಪ್ರಪಂಚದಲ್ಲೇ ಖ್ಯಾತಿ ಪಡೆದ ಫೇಸ್ ಬುಕ್ ಯಾರಿಗೆ ಗೊತ್ತಿಲ್ಲ ಹೇಳಿ. ಇದೇ ಫೇಸ್ ಬುಕ್ ಸಾಫ್ಟ್ ವೇರ್ ನ ಟ್ರಾನ್ಸ್ ಲೇಟ್( ಭಾಷಾಂತರ) ಮಾಡಿದ ತಪ್ಪಿಗೆ ವ್ಯಕ್ತಿ ಬಂಧನಕ್ಕೊಳಗಾಗಿದ್ದ.
ಬೆಳಗ್ಗೆದ್ದು ಜನ ಕನ್ನಡಿಯಲ್ಲೂ ಮುಖ ನೋಡದಿದ್ದರೂ ಫೇಸ್ ಬುಕ್ ನೋಡೊದು ಗ್ಯಾರಂಟಿ. ಹಾಲಾವಿಮ್ ಹಾಲ್ವಿ ಎನ್ನೋ ಹೆಸರಿನ ವ್ಯಕ್ತಿಯೂ ಅಷ್ಟೇ ಬೆಳಗ್ಗೆದ್ದು ಗುಡ್ ಮಾರ್ನಿಂಗ್ ಅಂತ ಮೆಸೇಜ್ ಹಾಕಿದ್ದ. ಆದರೆ ಅಂದ್ಯಾಕೋ ಆತನ ಗ್ರಹಚಾರ ಕೆಟ್ಟಿತ್ತು ಕಾಣಬೇಕು. ಪೊಲೀಸರು ಮಾತ್ರ ಆರೆಸ್ಟ್ ಮಾಡಿದ್ದರು.
ಫೇಸ್ ಬುಕ್ ತರ್ಜುಮೆ ಮಾಡಿದ ಯಡವಟ್ಟು ಹೀಗಿದೆ ನೋಡಿ:
ಪ್ಯಾಲೆಸ್ತೇನಿಯಾದ ಕಟ್ಟಡ ನಿರ್ಮಾಣದ ಗುತ್ತಿಗೆದಾರರೊಬ್ಬ ಬುಲ್ಡೋಜರ್ ಪಕ್ಕದಲ್ಲಿ ಸಿಗರೇಟ್ ಜತೆಗೆ ಟೀ ಕಪ್ ಹಿಡಿದುಕೊಂಡಿದ್ದ ಫೋಟೋವನ್ನು ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಎಂದು ಅರೆಬಿಕ್ ಭಾಷೆಯಲ್ಲಿ ಬರೆದು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದ, ಆದರೆ ಅದು ಫೇಸ್ ಬುಕ್ ಟ್ರಾನ್ಸ್ ಲೇಟ್ ಸಾಫ್ಟ್ ವೇರ್ ನಿಂದ " ದಾಳಿ ನಡೆಸಿ " ಎಂದು ಪೋಸ್ಟ್ ಆಗಿತ್ತು. ಕೈಯಲ್ಲಿ ಸಿಗರೇಟ್, ಪಕ್ಕದಲ್ಲಿ ಜೆಸಿಬಿ ಪೊಲೀಸರಿಗೆ ಇಷ್ಟೇ ಸಾಕಿತ್ತು. ಈತ ಏನೋ ಹಿಂಸಾಚಾರಕ್ಕೆ ಪ್ಲಾನ್ ಹಾಕ್ತಾ ಇರಬೇಕು ಎಂದು ಪೊಲೀಸರು ಪ್ಯಾಲೆಸ್ತೇನಿನ ಈ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದರು. ಆ ಬಳಿಕ ವಿಚಾರಣೆ ನಡೆಸಿ ಸಾಫ್ಟ್ ವೇರ್ ಯಡವಟ್ಟು ಎಂದು ಮನವರಿಕೆಯಾದ ಬಳಿಕ ಬಿಡುಗಡೆಗೊಳಿಸಿದರು. ಆದರೆ ಗುಡ್ ಮಾರ್ನಿಂಗ್ ಹೋಗಿ ದಾಳಿ ನಡೆಸಿ ಎಂದು ಫೇಸ್ ಬುಕ್ ಮಾಡಿದ ಅವಾಂತರಕ್ಕೆ ಸುಸ್ತಾದ ಯುವಕ ಕೊನೆಗೆ ಅಪ್ ಲೋಡ್ ಮಾಡಿದ ಪೋಸ್ಟ್ ಅನ್ನು ಡಿಲೀಟ್ ಮಾಡಿದ.